ಜನಸಂಘದ ಧುರೀಣ ಶ್ರೀಧರ ರಾವ್ ನಿಧನ
ಶಿವಮೊಗ್ಗ: ತೇಲ್ಕರ್ ಗೋವಿಂದ ರಾವ್ ಶ್ರೀಧರ ರಾವ್ (ಟಿ.ಜಿ. ಶ್ರೀಧರರಾವ್) ಮಂಗಳವಾರ ಬೆಳಗ್ಗೆ ಸ್ವಗೃಹದಲ್ಲಿ ವಿಧಿವಶರಾದರು. ಬಾಲ್ಯದಿಂದಲೂ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಶ್ರೀಧರರಾವ್, ಬಡತನದ ಮಧ್ಯೆ ವಿಚಾರಕ್ಕಾಗಿ ಬದುಕನ್ನು ಸವೆಸಿದವರು. ಗಾಂಧಿಬಜಾರಿನ ಬಸವಣ್ಣ ದೇವಸ್ಥಾನದ ಬಳಿ ಟೈಲರಿಂಗ್ ವೃತ್ತಿ ನಡೆಸಿಕೊಂಡು ಸಮಾಜದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.