ವಿಜೃಂಭಣೆಯ ದತ್ತ ಜಯಂತಿ
ಶಿಕಾರಿಪುರ: ದತ್ತ ಜಯಂತಿ ಅಂಗವಾಗಿ ಶಿಕಾರಿಪುರ ಪಟ್ಟಣದ ಪ್ರಮುಖ ಬೀದಿಯಲ್ಲಿ ಮಂಗಳವಾರ ಗುರು ದತ್ತಾತ್ರೇಯರ ಪಲ್ಲಕ್ಕಿ ಉತ್ಸವ ಬಹು ವಿಜೃಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ ತಾಲೂಕು ವಿಪ್ರ ಸಮಾಜದ ಅಧ್ಯಕ್ಷ ಗಣಪತಿ ಭಟ್, ಮುಖಂಡ ಚಿದಂಬರ್ ದೀಕ್ಷಿತ್, ಪ್ರಕಾಶ್, ಮಂಜುನಾಥ್, ಉಮೇಶ್ ಭಟ್ ,ಪ್ರದೀಪ್ ದೀಕ್ಷಿತ್, ಹರೀಶ್ ಜೋಯ್ಸ್, ಅಂಜನಾ ರಾವ್, ಲಿಂಗಮೂರ್ತಿ, ರಮಾ ದೀಕ್ಷಿತ್ ಮೊದಲಾದವರು ಹಾಜರಿದ್ದರು.
ಪ್ರತಿಭಾ ಕಾರಂಜಿ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ ಡಿ. 19ರಂದು ಬೆಳಗ್ಗೆ 9 ಗಂಟೆಯಿಂದ ನಗರದ ಸೆಕ್ರೇಡ್‌ಹಾರ್ಟ್ ಶಾಲಾ ಆವರಣದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಶಿವಮೊಗ್ಗ ತಾಲೂಕು ಮಟ್ಟದ ಏಕರೀತಿಯ ಸಾಂಸ್ಕೃತಿಕ ಸ್ಪರ್ಧೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ ಆಯೋಜಿಸಿದೆ. ಕ್ಲಸ್ಟರ್ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲೆಗಳ ಮುಖ್ಯೋಪಾಧ್ಯಾಯರು ವಿಜೇತ ಮಕ್ಕಳನ್ನು ಸ್ಪರ್ಧೆಗಳು ನಡೆಯುವ ದಿನಾಂಕದಂದು ಸೂಚಿಸಿದ ಸ್ಥಳದಲ್ಲಿ ಕರೆತರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಾನಾಯ್ಕ ತಿಳಿಸಿದ್ದಾರೆ.