ಇಂದು ಹುಂಡೈ ಕಾರು ಶೋ ರೂಂ ಉದ್ಘಾಟನೆ
ಶಿವಮೊಗ್ಗ: ಹುಂಡೈ ಕಾರು ಉತ್ಪಾದನಾ ಸಂಸ್ಥೆಯ ನೂತನ ಶೋ ರೂಂ ನಗರದಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಡಿ.19ರಂದು ಬೆಳಗ್ಗೆ 10.30 ಗಂಟೆಗೆ ಶೇಷಾದ್ರಿಪುರಂನ ಶಂಕರಮಠ ರಸ್ತೆಯಲ್ಲಿ ಸಜ್ಜುಗೊಂಡಿರುವ ನೂತನ ಮಾರಾಟ ಶಾಖೆ ರಾಹುಲ್ ಹುಂಡೈ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಮುಖ್ಯ ಅತಿಥಿಯಾಗಿ ಕಂಪೆನಿಯ ದಕ್ಷಿಣ ವಲಯ ಶಾಖೆ ವ್ಯವಸ್ಥಾಪಕ ವೈ.ಎಸ್. ಲೀ, ಕರ್ನಾಟಕ ಪ್ರಾಂತೀಯ ವ್ಯವಸ್ಥಾಪಕ ವಿ.ಕಾರ್ತಿಕ್ ಪಾಲ್ಗೊಳ್ಳುವರು ಎಂದು ರಾಹುಲ್ ಹುಂಡೈ ಶಾಖೆ ಸಹಾಯಕ ವ್ಯವಸ್ಥಾಪಕ ಎಚ್.ವಿ. ಸುರೇಶ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: ಬೆಂಗಳೂರಿನ ಕರ್ನಾಟಕ ವಲಯದ ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಜನರಲ್ ಅವರು ಅಂಚೆ ಇಲಾಖೆಯಲ್ಲಿ ಖಾಲಿ ಇರುವ 258 ಪೋಸ್ಟ್ ಮೆನ್ ಮತ್ತು ಮೇಲ್‌ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ. ಆಸಕ್ತರು ನಿಗದಿತ ನಮೂನೆಯ ಅರ್ಜಿಯನ್ನು ಜಿಲ್ಲಾ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಪಂಪನಗರ, 2ನೇ ತಿರುವು, ಗುತ್ಯಪ್ಪ ಕಾಲೋನಿ, ಸಾಗರ ರಸ್ತೆ, ಶಿವಮೊಗ್ಗ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು 2014ರ ಜನವರಿ 3ರೊಳಗೆ ಸಲ್ಲಿಸಬೇಕು. ವಿವರಗಳಿಗಾಗಿ ದೂ- 08182-255293 ಸಂಪರ್ಕಿಸಬಹುದು.