ವಡ್ಡಿನಕೊಪ್ಪದ ಮಾರಿಕಾಂಬ ದೇಗುಲ ಕಳಸ ಸ್ಥಾಪನೆ
ಶಿವಮೊಗ್ಗ: ವಡ್ಡಿನಕೊಪ್ಪದ ಮಾರಿಕಾಂಬ ಸೇವಾ ಸಮಿತಿ ಡಿ.19ರಿಂದ 22ರವರೆಗೆ ಅಮ್ಮನವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದೆ. 19ರಂದು ಸಂಜೆ 6.30ಕ್ಕೆ ಗಣೇಶ ಪೂಜಾ, ಪುಣ್ಯಾಹವಾಚನ, ಸ್ಥಾನ-ಪ್ರಸಾದ, ಶುದ್ಧಿ, ವಾಸ್ತು- ರಾಕ್ಷೋಘ್ನ ಹೋಮ- ಬಲಿ ಹಾಗೂ 25 ಕಳಸ ಸ್ಥಾಪನೆ ನೆರವೇರಲಿದೆ. ಡಿ. 20 ರಂದು ಬೆಳಗ್ಗೆ 8.30ಕ್ಕೆ ಗಂಗಾಪೂಜೆ ನಂತರ 9.30ಕ್ಕೆ ಗಣಪತಿ ಪೂಜೆ, ಪುಣ್ಯಾಹವಾಚನ, ಪ್ರಧಾನ-ಸಂಕಲ್ಪ, ಕಲಾತತ್ವ ಹೋಮ ಮತ್ತು ಬೆಳಗ್ಗೆ 11ಕ್ಕೆ ಹಂದಲಸು ಲಕ್ಷ್ಮೀನಾರಾಯಣ ಭಟ್ಟರಿಂದ ಮಾರಿಕಾಂಬ ದೇವಸ್ಥಾನದ ಗೋಪುರ ಕಳಸ ಸ್ಥಾಪನೆ ನಡೆಯಲಿದೆ.
ನಂತರ 11.30ಕ್ಕೆ ಕುಂಭಾಭಿಷೇಕ ಮತ್ತು ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಹಾಗೂ ಡಿ.21 ಮತ್ತು 22ರಂದು ಬೆಳಗ್ಗೆ 11.30ಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾರಿಕಾಂಬ ಸೇವಾ ಸಮಿತಿ ತಿಳಿಸಿದೆ. ವಿವರಗಳಿಗಾಗಿ- 9845280252 ಸಂಪರ್ಕಿಸಬಹುದು.