ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಿಇಟಿ ಕಾಯ್ದೆ ವಿರುದ್ಧ ಪ್ರತಿಭಟನೆ

Lingaraj Badiger
Updated On : 19 Dec 2013, 11:26 am

ಶಿರಾಳಕೊಪ್ಪ: ಪಟ್ಟಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿಇಟಿ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಮಾನವ ಸರ್ಪಳಿ ನಿರ್ಮಿಸಿ, ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ನಾಡ ಕಚೇರಿಗೆ ತೆರಳಿ ಉಪ ತಹಸೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು.
ವಿದ್ಯಾರ್ಥಿ ನಾಯಕ ಚಿನ್ಮಯಿ ಮಾತನಾಡಿ, ರಾಜ್ಯ ಸರ್ಕಾರ ಮೆಡಿಕಲ್ ಹಾಗೂ ಎಂಜನಿಯರ್ ಸಿಇಟಿ ಶುಲ್ಕವನ್ನು ಹೆಚ್ಚಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಲಾಭ ಗಳಿಸಲು ಅನುವು ಮಾಡಿಕೊಟ್ಟು ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಈ ಹಿಂದೆ ಸಿಇಟಿ ಮುಖಾಂತರ ಸುಲಭವಾಗಿ ಸುಲಭವಾಗಿ ಪ್ರವೇಶ ಸಿಗುತ್ತಿತ್ತು. ಈಗಿನ ಪದ್ಧತಿ ಪ್ರಕಾರ ಸರ್ಕಾರ ಈ ಹಿಂದೆ ಸರ್ಕಾರ ನಿಗದಿ ಮಾಡಿರುವ 33000 ಬದಲು ಕನಿಷ್ಠ 2 ಲಕ್ಷ ಕಟ್ಟುವಂತೆ ಮಾಡಲು ಹೊರಟಿದೆ. ಇದು ಬಡ ವಿದ್ಯಾರ್ಥಿಗಳು ಈವರೆಗೆ ಸುಲಭವಾಗಿ ಸಿಇಟಿ ಮುಖಾಂತರ ಪಡೆಯುತ್ತಿದ್ದ ಸೀಟು ಸಿಗದಂತೆ ಮಾಡಿ ಉಳ್ಳವರಿಗೆ ಲಾಭ ಮಾಡಿಕೊಡಲು ಹೊರಟಿದೆ ಎಂದರು.
ಪ್ರತಿಭಟನೆ ನೇತೃತ್ವವನ್ನು ವಿನಾಯಕ ಕೆ.ಎಂ., ವಿನಾಯಕ ಎಂ.ಆರ್., ಅಭಿಷೇಕ್ ಅರುಣ್, ಕು.ವಿದ್ಯಾ, ನಯನಾ, ಸುಷ್ಮಾ ಹಾಗೂ ರಂಜಿತ ಮತ್ತಿತರರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement