ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಡಿತರ ಚೀಟಿ ಕೇಂದ್ರಗಳ ಲಾಗಿನ್ ಸ್ಥಗಿತ: ಡಿಸಿಗೆ ಮನವಿ

Lingaraj Badiger
Updated On : 20 Dec 2013, 11:11 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಡಿ.19
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಸೇವಾ ಕೇಂದ್ರಗಳಿಗೆ ನೀಡಿದ್ದ ಲಾಗಿನ್ ಸ್ಥಗಿತಗೊಳಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕ್ರಮ ಹಿಂಪಡೆಯುವಂತೆ ಆಗ್ರಹಿಸಿ ಸೇವಾ ಕೇಂದ್ರಗಳ ಮಾಲೀಕರು ಗುರುವಾರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ನಗರದ 59 ಕಡೆ ಸೇವಾ ಕೇಂದ್ರ ತೆರೆದು ಪಡಿತರ ಚೀಟಿಗಳಿಗೆ ಆನ್‌ಲೈನ್‌ನಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ನಾಗರಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಪ್ರತ್ಯೇಕ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಕೊಡಲಾಗಿತ್ತು. ಇದರಲ್ಲಿ ಬಹುತೇಕ ಸೈಬರ್ ಕೆಫೆಗಳಾಗಿದ್ದು, ಅರ್ಜಿ ಸಲ್ಲಿಕೆಗೆ ಅಗತ್ಯವಾದ ಬಯೋವುಟ್ರಿಕ್ ವಿವರ ಸಂಗ್ರಹಿಸಲು ಸಾವಿರಾರು ರುಪಾಯಿ ತೆತ್ತು ಅಗತ್ಯ ಉಪಕರಣ ಖರೀದಿಸಲಾಗಿತ್ತು. ಇದೀಗ ಏಕಾಏಕಿ ಲಾಗಿನ್ ಸ್ಥಗಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆನ್‌ಲೈನ್ ಮೂಲಕ ಅರ್ಜಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಸೇವಾಕೇಂದ್ರಗಳಿಗೆ ನೀಡಿದ್ದ ಲಾಗಿನ್ ಸ್ಥಗಿತಗೊಳಿಸಿದೆ. ಇದಕ್ಕೆ ಬದಲಾಗಿ ಶಿವಮೊಗ್ಗ ಒನ್ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಇದು ಅಸಮಂಜಸ ಕ್ರಮವಾಗಿದೆ ಎಂದರು.
ಸ್ಥಗಿತಗೊಳಿಸಲಾಗಿರುವ ಲಾಗಿನ್ ಪುನರ್ ನೀಡಬೇಕು. ಶಿವಮೊಗ್ಗ ಒನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸುವ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ನಗರಸಭೆ ಸದಸ್ಯ ಐಡಿಯಲ್ ಗೋಪಿ, ಜಗದೀಶ್, ಸುರೇಶ್, ಅನಿಲ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement