ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ವ್ಯಕ್ತಿತ್ವ ವಿಕಸನ ಶಕ್ತಿ ನಮ್ಮಲ್ಲೇ ಅಡಗಿದೆ'

Lingaraj Badiger
Updated On : 20 Dec 2013, 11:06 am

ಕ.ಪ್ರ.ವಾರ್ತೆ, ಸೊರಬ, ಡಿ.19
ಪ್ರಕೃತಿ ಎಂದರೆ ಗೌರಿ, ಪುರುಷ ಎಂದರೆ ಶಿವ. ಪ್ರಾಪಂಚಿಕ ವ್ಯಾಮೋಹದಿಂದ ಗೌರಿಶಂಕರವನ್ನು ಹತ್ತಲು ಸಾಧ್ಯವಿಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಫಲಾಪೇಕ್ಷೆ ಇರಬಾರದು ಎಂದು ಖ್ಯಾತ ಯಕ್ಷಗಾನ ಅರ್ಥಧಾರಿ ರಾಮಚಂದ್ರ ನಿಸರಾಣಿ ಹೇಳಿದರು.
ಪಟ್ಟಣದ ಮುರುಘಾಮಠದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ನಮ್ಮನ್ನು ನಡೆಸು ಎಂದು ದೇವರಲ್ಲಿ ಬೇಡಿದರೂ ಸಹಾ ನಡೆಯುವವರು ನಾವೇ. ಅಂದರೆ ನಮ್ಮನ್ನು ರೂಪಿಸುವ ಶಕ್ತಿ ನಮ್ಮಲ್ಲಿಯೇ ಇದೆ ಎಂಬುದನ್ನು ಅರಿಯಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಜಡೆ ಸಂಸ್ಥಾನಮಠದ ಡಾ.ಮಹಾಂತಶ್ರೀ ಆಶೀರ್ವಚನ ನೀಡಿ, ಭಗವದ್ಗೀತೆ ಮನುಷ್ಯನ ಬದುಕು ಮತ್ತು ಆದರ್ಶ ರೂಪಿಸಿ ಚೈತನ್ಯ ನೀಡುತ್ತದೆ. ಎಲ್ಲಾ ಆಧ್ಯಾತ್ಮಗಳ ಸಾರ ಭಗವದ್ಗೀತೆಯಾಗಿದೆ. ಮನುಷ್ಯ ಬದುಕಿನ ಶ್ರೇಷ್ಠತೆ, ರಾಷ್ಟ್ರದ ಯೋಗಕ್ಷೇವು ಭಗವದ್ಗೀತೆಯಿಂದ ಸಾಧ್ಯ ಎಂದು ತಿಳಿಸಿದರು.
ಸಾಲೂರು ಮಠದ ರೇಣುಕಾಚಾರ್ಯಶಾಸ್ತ್ರಿಗಳ ಸಮ್ಮಖ ನಡೆದ ಕಾರ್ಯಕ್ರಮದಲ್ಲಿ ಭಗವದ್ಗೀತಾ ಅಭಿಯಾನದ ತಾಲೂಕು ಸಮಿತಿ ಅಧ್ಯಕ್ಷ ದಿನಕರ ಭಟ್ ಭಾವೆ, ಕಾರ್ಯದರ್ಶಿ ಷಣ್ಮುಖಾಚಾರ್, ಸಂಚಾಲಕ ಮಹೇಶ್ ಗೋಖಲೆ, ಚೆನ್ನಪ್ಪ ಗೌಡ, ಕುಸುಮಾ ಆರ್.ಸಿ. ಪಾಟೀಲ್, ಕವಿತಾ ಪಾಟೀಲ್, ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement