ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಿರೇಕೆರೂರು ಘಟಕದಿಂದ ಹಾವೇರಿಗೆ ನೂತನ ಬಸ್

Lingaraj Badiger
Updated On : 20 Dec 2013, 11:06 am

ಶಿರಾಳಕೊಪ್ಪ:  ಹಾವೇರಿ ವಿಭಾಗದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರೇಕೆರೂರು ಘಟಕದಿಂದ ಹೊಸ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.
ಪ್ರತಿದಿನ ಬೆಳಗ್ಗೆ 7.15 ಗಂಟೆಗೆ ಹಿರೇಕೆರೂರಿನಿಂದ ಶಿರಾಳಕೊಪ್ಪಕ್ಕೆ ಬರುವ ಬಸ್ ನಂತರ ಶಿರಾಳಕೊಪ್ಪದಿಂದ 8 ಗಂಟೆಗೆ ಹೊರಟು ಹಾವೇರಿಗೆ 10.45 ಗಂಟೆಗೆ ತಲುಪುತ್ತದೆ.
ಈ ಬಸ್ ಸಂಚಾರದಿಂದ ಶಿರಾಳಕೊಪ್ಪ ಭಾಗದ ಸುಣ್ಣದಕೊಪ್ಪ, ಮುತ್ತಿಗೆ ಶಿರಾಳಕೊಪ್ಪ ಮುಖಾಂತರ ದೇವಿಕೊಪ್ಪ, ಹೊಸೂರು, ಸೊರಬ ತಾಲೂಕಿನ ಕಬ್ಬೂರು, ತಲ್ಲೂರು, ನೆಗವಾಡಿ, ಎಣ್ಣೆಕೊಪ್ಪ, ಕಮ್ಮನಹಳ್ಳಿ ಹಾವೇರಿ ಜಿಲ್ಲೆಯ ಹೆರೂರು ಸಂಗೂರು ಮುಖಾಂತರ ಹಾವೇರಿ ತಲುಪಲಿದೆ.
ಹಾವೇರಿಯಿಂದ 11 ಗಂಟೆಗೆ ಹೊರಡುವ ಬಸ್ ತಿಳವಳ್ಳಿಯಿಂದ ಶಿಕಾರಿಪುರಕ್ಕೆ ತಲುಪಲಿದೆ. ಶಿರಾಳಕೊಪ್ಪ-ಶಿಕಾರಿಪುರ ಮಧ್ಯೆ ಇರುವ ಪುನೇದಹಳ್ಳಿ, ಜಕ್ಕನಹಳ್ಳಿ ಮುಖಾಂತರ 2-30 ಗಂಟೆಗೆ ಶಿಕಾರಿಪುರ ತಲುಪಲಿದೆ. ಶಿಕಾರಿಪುರದಿಂದ 3 ಗಂಟೆಗೆ ಹೊರಡುವ ಬಸ್ ತಿಳವಳ್ಳಿಗೆ 4.30 ಗಂಟೆಗೆ ತಲುಪಲಿದೆ. ಸಂಜೆ ತಿಳವಳ್ಳಿಯಿಂದ 5 ಗಂಟೆಗೆ ಹೊರಟು ರಾತ್ರಿ 7 ಗಂಟೆಗೆ ಮತ್ತೆ ಶಿರಾಳಕೊಪ್ಪ ಮುಖಾಂತರ ಹಿರೇಕೆರೂರು ತಲುಪಲಿದೆ ಎಂದು ವಿಭಾಗಿಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement