ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಮಹಿಳೆ ಮಮತೆ, ಕರುಣೆಯ ಪ್ರತೀಕ'

Lingaraj Badiger
Updated On : 21 Dec 2013, 11:08 am

ಭದ್ರಾವತಿ: ಮಹಿಳೆ ಮಮತೆ, ಕರುಣೆಯ ಪ್ರತೀಕ ಎಂದು ಮುನೀರ ಸಾಹಿಬ್ ಹೇಳಿದರು.
ಅವರು ಗುರುವಾರ ಕರ್ನಾಟಕ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ ಹಳೇನಗರದ ಜಾಮಿಯಾ ಶಾದಿಮಹಲ್‌ನಲ್ಲಿ “ÈÚßÕ׿ ಮಾನವತೆಯ ÌÆ°’ ಎಂಬ ವಿಷಯದ ಕುರಿತಂತೆ ಏರ್ಪಡಿಸಿದ್ದ ಮಹಿಳೆಯರ ಏಕ ದಿನ ತಾಲೂಕು ಸಮ್ಮೇಳನದಲ್ಲಿ ಮಾತನಾಡಿ, ಮಹಿಳೆ ಕುಟುಂಬದಲ್ಲಿ ತಾಯಿಯಾಗಿ ಮಮತೆ, ಕರುಣೆಯ ಸಾಕಾರ ಮೂರ್ತಿಯಾಗಿ, ಪತ್ನಿಯಾಗಿ ಪ್ರೀತಿ, ನಿಷ್ಠೆಯ ಪ್ರತಿರೂಪವಾಗಿ, ಮಗಳಾಗಿ ಕರುಳಕುಡಿ ಎನಿಸಿ, ಸಹೋದರಿಯಾಗಿ ಆಪ್ತ ಮಾರ್ಗದರ್ಶಕಿ, ಸಹಾಯಕಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಹಿಳೆ ಮಾನವತೆಯ ಶಿಲ್ಪಿಯಾಗಿದ್ದಾಳೆ ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ಜಮಾತೆ ಇಸ್ಲಾಮಿ ಮಹಿಳಾ ವಿಭಾಗದ ಆಡಳಿತಾಧಿಕಾರಿ ಹಸ್ಮಾತಾಸಿನ್, ಇಸ್ಲಾಂ ಧರ್ಮ ಮಹಿಳೆಯರ ಸಂರಕ್ಷಣೆ, ಗೌರವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ ಎಂದರು.
ನಾಜಿಮಾ ಸುಲ್ತಾನ್, ನಸೀಮುನ್ನೀಸ, ಮದೀಹ ಹರ್ಷ, ರಹಮತ್ ಉನ್ನೀಸ, ತಸ್ಮೀಲ ಖಾನಂ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement