ಕಂದಾಯ ಅದಾಲತ್: 195 ಅರ್ಜಿ ತಿದ್ದುಪಡಿ
ಹೊಸನಗರ: ಪ್ರತಿ ತಿಂಗಳು ನಡೆಯುವ ಕಂದಾಯ ಅದಾಲತ್ ಕಾರ್ಯಕ್ರಮವು ರೈತರಿಗೆ ವರದಾನವಾಗಿದೆ. ಈ ವರೆಗೆ 195 ಅಜರ್ ಪಡೆದಿದ್ದು ತಿದ್ದುಪಡಿಗಳಿಗೆ ಶಿಪಾರಸ್ಸು ಮಾಡಲಾಗಿದೆ ಎಂದು ಸಾಗರ ವಿಭಾಗ ಉಪ ವಿಭಾಗಾಧಿಕಾರಿ ಡಾ. ಉದಯ ಕುಮಾರ್ ಶೆಟ್ಟಿ ತಿಳಿಸಿದರು.
ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅದಾಲತ್ನಲ್ಲಿ ರೈತರು ತಮ್ಮ ಪಹಣಿ ತಿದ್ದುಪಡಿ, ಆಕಾರ್ ಬಂಧು ದುರಸ್ತಿ, ಆಸ್ತಿಗಳ ಸಮಗ್ರ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು. ತಹಸೀಲ್ದಾರ್ ಚಿದಂಬರ್ ಕುಲಕರ್ಣಿ, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿದ್ದರು.
ರುದ್ರಭೂಮಿ ಬೇಕು: ತಾಲೂಕಿನ ಕಾರಣಗಿರಿ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗುವಂತಹ ರುದ್ರಭೂಮಿಗೆ ಸ್ಥಳಾವಕಾಶ ಮಾಡಿಕೊಡಬೇಕು ಎಂದು ಕಾರಣಗಿರಿ ದತ್ತಾತ್ರೆಯ ಅಡಿಗ ಉಪವಿಭಾಗಾಧಿಕಾರಿಗಳಲ್ಲಿ ಮನವಿ ಮಾಡಿದರು. ಈ ಬಗ್ಗೆ ಗ್ರಾಮ ಪಂಚಾಯತಿಗೆ ಕಾಲ ಕಾಲಕ್ಕೆ ಕೊಟ್ಟ ಮನವಿ ಪತ್ರ ಕಸದ ಬುಟ್ಟಿ ಸೇರಿದೆ. ಈ ಬಗ್ಗೆ ಸ್ಥಳಾವಕಾಶ ಮಾಡಿಕೊಡುವುದಲ್ಲದೇ ವಿದ್ಯುತ್ ಚಿತಾಗಾರ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.