ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಖಾತ್ರಿ ಯೋಜನೆ ಸದ್ವಿನಿಯೋಗ ಮಾಡಿಕೊಳ್ಳಿ

Lingaraj Badiger
Updated On : 23 Dec 2013, 12:05 pm

ತ್ಯಾಗರ್ತಿ: ನಮ್ಮ ಉದ್ಯೋಗ ನಮ್ಮ ಹಳ್ಳಿಗೆ, ನಮ್ಮ ಗ್ರಾಮದ ಅಭಿವೃದ್ಧಿಯೇ ಮೊದಲ ಆದ್ಯತೆ ಎಂದು ತಿಳಿದು ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಸಾಗರ ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧನಾ ತಂಡದ ಸಂಯೋಜಕ ನಟರಾಜ್ ಸಲಹೆ ನೀಡಿದರು.
ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಪಂ ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಲೆಕ್ಕ ಪರಿಶೋಧನೆ ನಡೆಸಿ, ಈ ಯೋಜನೆ ಹಕ್ಕು ಆಧಾರಿತ ಕಾರ್ಯಬದ್ಧ ಉದ್ಯೋಗ ಬಯಸುವ ಗ್ರಾಮಸ್ಥರಿಗೆ ವರದಾನವಾಗಿದ್ದು, ನಾಮ್ ಕೇ ವಾಸ್ತೆಗೆ ಜಾಬ್ ಕಾರ್ಡ್ ಪಡೆದು ವರ್ಷದಲ್ಲಿ ಒಂದು ದಿನವೂ ಖಾತ್ರಿ ಯೋಜನೆಯಲ್ಲಿ ಪಾಲ್ಗೊಳ್ಳದಿದ್ದರೆ ಅಂತಹ ಜಾಬ್ ಕಾರ್ಡ್‌ಗಳನ್ನು ಸರ್ಕಾರದ ಮಟ್ಟದಲ್ಲೇ ರದ್ದುಗೊಳಿಸಲಾಗುವುದು ಎಂದರು.
ಸಹಕಾರಕ್ಕೆ ಮನವಿ: ವೈಯಕ್ತಿಕ ಕಾಮಗಾರಿಗಳಿಗಿಂತಲೂ ಸಾರ್ವಜನಿಕ ಕಾಮಗಾರಿಗಳಿಗೆ ಹಾಗೂ ಶೌಚಾಲಯ ನಿರ್ಮಾಣ, ಹಸಿರೀಕರಣ, ಕೃಷಿ ಆಧಾರಿತ ಚಟುವಟಿಕೆಗಳಿಗೆ ಆದ್ಯತೆ ನೀಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ಸೃಷ್ಟಿಯಾಗಲು ಎಲ್ಲಾ ಗ್ರಾಮಸ್ಥರು ಸಹಕರಿಸಬೇಕು ಎಂದು ಹೇಳಿದರು.
ನೋಡಲ್ ಅಧಿಕಾರಿಯಾಗಿ ಪಾಲ್ಗೊಂಡಿದ್ದ ಸಹಾಯಕ ಕೃಷಿ ಅಧಿಕಾರಿ ತಿಮ್ಮಪ್ಪ ಮಾತನಾಡಿ, ಅಂತರ್ಜಲ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಇಂಗು ಗುಂಡಿ, ತಿರುವು ಕಾಲುವೆ, ಕೃಷಿ ಹೊಂಡಗಳ ನಿರ್ಮಾಣ ಆದ್ಯತೆಗೆ ಉದ್ಯೋಗ ಖಾತ್ರಿ ಯೋಜನೆ ಉಪಯೋಗಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಹಿರೆಬಿಲಗುಂಜಿ ಗ್ರಾಪಂ ಅಧ್ಯಕ್ಷೆ ವೀಣಾ ಸಂಪಳ್ಳಿ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯ ಸುಬ್ಬಪ್ಪ, ಯೋಗೀಶ, ಕಿರಿಯ ಎಂಜಿನಿಯರ್ ಅಂಬರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಷ್ಪಾಕ್ ಅಹಮದ್, ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯದರ್ಶಿ ಆದರ್ಶ ನಿರೂಪಿಸಿ ವಂದಿಸಿದರು.
ಆಗ್ರಹ: ಹಿರೇಬಿಲಗುಂಜಿ  ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸದೇ ಇದ್ದು, ಪಡಿತರ ಪಡೆಯಲು ಮಾತ್ರ ಆಗಮಿಸುವವರನ್ನು ಗುರುತಿಸಿ ಅಂತಹವರ ಪಡಿತರ ಚೀಟಿಯನ್ನು ರದ್ದುಗೊಳಿಸಬೇಕು. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾರ್ವಜನಿಕ ಕಾಮಗಾರಿಗಳಿಗೆ ಸಹಕರಿಸದೆ ಇರುವವರಿಗೆ ವೈಯಕ್ತಿಕ ಕಾಮಗಾರಿ ನಿರ್ಮಿಸಿಕೊಳ್ಳಲು ಅವಕಾಶ ನೀಡಬಾರದೆಂದು ಹಿರೇಬಿಲಗುಂಜಿ ಗ್ರಾಪಂ ಸದಸ್ಯ ಯೋಗೀಶ್ ಹುತ್ತಾದಿಂಬ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement