ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬೇಡಿಕೆ ಈಡೇರಿಕೆಗಾಗಿ ನೌಕರರ ಸಂಘ ಇಂದು ಪ್ರತಿಭಟನೆ

Lingaraj Badiger
Updated On : 23 Dec 2013, 11:54 am

ಶಿವಮೊಗ್ಗ: ಖಾಸಗಿ ಸಂಸ್ಥೆಗಳ ಮತ್ತು ಖಾಸಗಿ ನೌಕರರ ಒಕ್ಕೂಟ ವಿವಿಧ ಬೇಡಿಕೆ ಈಡೇರಿಕೆಗಾಗಿ ಡಿ. 23ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ನಗರದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಇಎಸ್‌ಐ ವಿಮಾ ಕಾರ್ಡ್‌ದಾರರಿದ್ದು, ಇವರ ಇಎಸ್‌ಐ ಸೌಲಭ್ಯ ಉತ್ತಮಗೊಳಿಸಲು 4 ಇಎಸ್‌ಐ ಚಿಕಿತ್ಸಾಲಯ ಹಾಗೂ ಒಂದು ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆ ಇದೆ.
ಭದ್ರಾವತಿ ಹಾಗೂ ಮಾಚೇನಹಳ್ಳಿ ವಸಾಹತು ವಲಯಗಳಲ್ಲಿರುವ ಕಾರ್ಮಿಕರಿಗೆ ಹೆಚ್ಚುವರಿ ಇಎಸ್‌ಐ ಚಿಕಿತ್ಸಾಲಯಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಬಿ.ಎಚ್. ರಸ್ತೆಯ ಗಾಯಿತ್ರಿ ಮಾಂಗಲ್ಯ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದೆ.
ಈ ಸಂಬಂಧವಾಗಿ ಇಎಸ್‌ಐ ಕಾರ್ಡ್ ಹೊಂದಿರುವ ವಿಮಾದಾರರು ಹಾಗೂ ಅವರ ಕುಟುಂಬ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಒಕ್ಕೂಟದ ಎಚ್. ನಟರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement