ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಭಾವಗೀತೆ ಸ್ಪರ್ಧೆ

Lingaraj Badiger
Updated On : 23 Dec 2013, 11:55 am

ಶಿವಮೊಗ್ಗ: ಕರ್ನಾಟಕ ಸಂಘದಲ್ಲಿ ಡಿ. 28ರಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಡಾ. ಶಿವಮೊಗ್ಗ ಸುಬ್ಬಣ್ಣ ಮತ್ತು ಅವರ ಸಹೋದರ ಎಸ್.ಜಿ. ಯಜ್ಞನಾರಾಯಣ ಅವರು ಸ್ಥಾಪಿಸಿರುವ ದಿ ರಂಗನಾಯಕಮ್ಮ ಗಣೇಶ್‌ರಾವ್ ದತ್ತಿನಿಧಿ ಕನ್ನಡ ಭಾವಗೀತಾ ಸ್ಪರ್ಧೆ ಏರ್ಪಡಿಸಿದೆ. ನಗರದ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜು ವಿಭಾಗದ ವಿಜೇತರಿಗೆ ಪ್ರತ್ಯೇಕವಾಗಿ ಬಹುಮಾನ ವಿತರಣೆ ನೀಡಲಾಗುವುದು ಎಂದು ಸಂಘದ ಗೌರವ ಕಾರ್ಯದರ್ಶಿ ಡಾ ಎಚ್.ಎಸ್. ನಾಗಭೂಷಣ ತಿಳಿಸಿದ್ದಾರೆ. ವಿವರಗಳಿಗಾಗಿ ದೂ. 08182277406.
ಕ್ರಿಕೆಟ್ ಪಂದ್ಯಾವಳಿ
ಶಿವಮೊಗ್ಗ: ಲೇಹರ್ ಕ್ರಿಕೆಟರ್ಸ್ ಹೊಸ ವರ್ಷದ ಪ್ರಯುಕ್ತ ಜ. 2ರಿಂದ 5ರವರೆಗೆ ಸೂಳೇಬೈಲು ಬಳಿಯ ಗೋಪಾಲಿ ಮೈದಾನದಲ್ಲಿ ರಾಜ್ಯ ಮಟ್ಟದ ಹೊನಲು- ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ. ಆಸಕ್ತ ತಂಡಗಳು ಡಿ. 25ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಪ್ರವೇಶ ಶುಲ್ಕ 2,500 ಹಾಗೂ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 50 ಸಾವಿರ, ದ್ವಿತೀಯ ಬಹುಮಾನ 25 ಸಾವಿರ ನಿಗದಿ ಮಾಡಲಾಗಿದೆ ಎಂದು ಕ್ರಿಕೆಟರ್ಸ್ ತಿಳಿಸಿದೆ. ವಿವರಗಳಿಗಾಗಿ ಮೊ. 9741295226.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ತ್ಯಾವರೇಚಟ್ನಹಳ್ಳಿಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 24ರಂದು ಮೂರನೇ ತ್ರೈಮಾಸಿಕ ದುರಸ್ತಿ ಕಾರ್ಯ ಇರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಬೆಳಗ್ಗೆ 9ರಿಂದ ಸಂಜೆ 6ಗಂಟೆವರೆಗೆ ತ್ಯಾವರೇಚಟ್ನಹಳ್ಳಿ, ಎಂಜಿನಿಯರಿಂಗ್ ಕಾಲೇಜು, ಫರ್ಫೆಕ್ಟ್ ಅಲಾಯ್ಸ್, ಶಾಂತಿ ನಗರ, ಈಶ್ವರ್ ರೈಸ್ ಮಿಲ್, ಪೇಸ್ ಕಾಲೇಜು, ಗೋಂದಿಚಟ್ನಹಳ್ಳಿ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಮೇಲಿನ ಹನಸವಾಡಿ, ಕೆಳಗಿನ ಹನಸವಾಡಿ, ಬೆಳಲಕಟ್ಟೆ, ಬಸವನಗಂಗೂರು, ರತ್ನಾಕರ ಲೇಜೌಟ್, ಚನ್ನಮುಂಭಾಪುರ, ಕೃಷಿ ವಿದ್ಯಾಲಯ, ಬಾಪೂಜಿ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಕಾರ್ಯಕಾರಿ ಸಭೆ
ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಮತ್ತು ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಕಾರ್ಯಕಾರಿ ಸಮಿತಿ ಸಭೆ ಡಿ. 24ರಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ. ಗ್ರಾಮಾಂತರ ಸಮಿತಿ ಸಭೆಯು ಬೆಳಗ್ಗೆ 10.30ಕ್ಕೆ ಹಾಗೂ ಹೊಳೆಹೊನ್ನೂರು ಸಮಿತಿ ಸಭೆಯು ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಸಭೆಯಲ್ಲಿ ರೈತರ ಸಮಸ್ಯೆಗಳು, ಸದಸ್ಯತ್ವ ನೋಂದಣಿ, ಮುಂಬರುವ ಲೋಕಸಭಾ ಚುನಾವಣೆ ಮತ್ತು ಪಕ್ಷ ಸಂಘಟನೆ ಕುರಿತು ಚರ್ಚಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement