ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಳಪೆ ಬೀಜ ವಿತರಿಸಿದ ಕಂಪನಿ ವಿರುದ್ಧ ಹೋರಾಟ

Lingaraj Badiger
Updated On : 26 Dec 2013, 11:31 am

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಡಿ. 25
ಅನ್ನದಾತನಾದ ರೈತನಿಗೆ ಕೆಲವು ಕಂಪನಿಗಳು ಕಳಪೆ ಬೀಜ ವಿತರಿಸಿ ರೈತರ ಜೀವನದ ಜೊತೆಗೆ ಚೆಲ್ಲಾಟ ವಾಡುತ್ತಿವೆ. ಅಮ್ಮಾನ್ ಸೋನಾ ಎಂದು ಕಳಪೆ ಬೀಜ ವಿತರಿಸಿರುವ ಕಂಪನಿ ಪ್ರಮುಖರು ಸಮಸ್ಯೆಯನ್ನು ಖುದ್ದು ಬಗೆಹರಿಸುತ್ತೇವೆ ಎಂದು ಹೇಳಿ ರೈತರನ್ನು ಸತಾಯಿಸಿದರೆ ಉಗ್ರ ಹೋರಾಟ ಮಾಡಬೇಕಾದೀತು ಎಂದು ರೈತಹೋರಾಟ ಸಮಿತಿ ಅಧ್ಯಕ್ಷ ರಾಜಣ್ಣ ಎಚ್ಚರಿಸಿದ್ದಾರೆ.
ಶಿರಾಳಕೊಪ್ಪ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಪದಾಧಿಕಾರಿಗಳು ಈಗಾಗಲೇ ಶಿರಾಳಕೊಪ್ಪ  ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಎಸ್‌ಐ ಸಮ್ಮುಖದಲ್ಲಿ ಕಳೆದ ಗುರುವಾರ ಶಿರಾಳಕೊಪ್ಪಕ್ಕೆ ಖುದ್ದು ಆಗಮಿಸಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ರೈತರು ಸುಮ್ಮನಿದ್ದರು. ಒಂದು ವಾರವಾದರೂ ಕಂಪನಿಯ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಆದರೆ ಇದನ್ನು ರೈತರ ದೌರ್ಬಲ್ಯ ಎಂದು ತಿಳಿದರೆ ಈ ಬಗ್ಗೆ ಸೋಮವಾರ ಹೋರಾಟ ಕೈಗೆತ್ತಿಕೊಳ್ಳುವುದಾಗಿ ಸಂಘ ಎಚ್ಚರಿಸಿದೆ.
ಕಳಪೆ ಬೀಜದ ಕಂಪನಿಗಳ ವಿರುದ್ದ ಪೋಲೀಸ್ ಇಲಾಖೆ ಮತ್ತು ಕ್ರಷಿ ಇಲಾಖೆ ಕ್ರಮಕೈಗೊಳ್ಳ ಬೇಕು ಎಂದು ಉಡಗಣಿ-ತಾಳಗುಂದ ಹೋಬಳಿ ರೈತ ಹೋರಾಟ ಸಮಿತಿಯ ಅಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಉಡಗಣಿ ಕೊಟ್ರೇಶ್,ಮಾಳಗೊಂಡನಕೊಪ್ಪ ವೀರಣ್ಣ,ನೇರಲಗಿ ಭರ್ಮಣ್ಣ,ಮುಗಳಿಕೊಪ್ಪದ ಹಂಪೇಶಪ್ಪ, ತಾಳ ಗುಂದ ಸತೀಶ್,ಉಡಗಣಿ ನಯೀಂಬಾಷಾ ಹಾಗು ಇತರರು ಒತ್ತಾಯಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement