ಚಂಡಿಕಾ ಹೋಮ
ಶಿವಮೊಗ್ಗ: ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ.31ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಶ್ರೀ ಚಂಡಿಕಾ ಹೋಮ ಏರ್ಪಡಿಸಲಾಗಿದೆ. ಸೇವಾ ಶುಲ್ಕ 151 ನಿಗದಿ ಮಾಡಲಾಗಿದ್ದು, ಹೋಮಕ್ಕೆ ಅಕ್ಕಿ, ಬೆಲ್ಲ,ತುಪ್ಪ, ಹಣ್ಣು, ಕಾಯಿಕೊಡುವ ಭಕ್ತಾಧಿಗಳು ಬೆಳಿಗ್ಗೆ 9ರೊಳಗೆ ನೀಡಬಹುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಭಕ್ತವೃಂದ ತಿಳಿಸಿದೆ. ವಿವರಗಳಿಗಾಗಿ-08182-273122.
ಅರ್ಜಿ ಆಹ್ವಾನ
ಶಿವಮೊಗ್ಗ: ಹೊಳಲೂರಿನ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರೋದ್ಯೋಗಿ ಯುವತಿಯರಿಗಾಗಿ ಉಚಿತ ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಡ್ರೆಸ್ ಡೈಸೈನ್, (ಟೈಲರಿಂಗ್-ಮಹಿಳೆಯರಿಗೆ, ದಿನ 21), ಹ್ಯಾಂಡ್ ಎಂಬ್ರಾಯಿಡ್ರಿ(ಕೈ ಕಸೂತಿ, 15 ದಿನ) ಮತ್ತು ಎಂಬ್ರಾಯಿಡ್ರಿ ಮತ್ತು ಫ್ಯಾಬರಿಕ್ ಪೈಟಿಂಗ್(ಕಸೂತಿ ಮತ್ತು ಕ್ಲಾತ್ ಪೈಟಿಂಗ್, 15 ದಿನ) ಪ್ರತ್ಯೇಕ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಯು 18ರಿಂದ 45 ವರ್ಷ ವಯೋವುತಿಯೊಳಗಿನವರಾಗಿದ್ದು, ಓದು ಬರಹ ಬಲ್ಲವರಾಗಿದ್ದು, ಸ್ವ- ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ- ವಸತಿ ವ್ಯವಸ್ಥೆ ಇದೆ. ತರಬೇತಿಯು ಜನವರಿ ಮೊದಲನೇ ವಾರದಲ್ಲಿ ಪ್ರಾರಂಭವಾಗಲಿದೆ. ಆಸಕ್ತರು ಹೆಸರು, ವಿಳಾಸ, ವಿದ್ಯಾರ್ಹತೆ ಮತ್ತು ಮೊಬೈಲ್ ನಂಬರ್ ಮತ್ತಿತರ ಮಾಹಿತಿಯ ವಿವರಗಳೊಂದಿಗೆ ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹೊನ್ನಾಳಿ ಮಾರ್ಗ, ಹೊಳಲೂರು-577216 ಶಿವಮೊಗ್ಗ ಇಲ್ಲಿಗೆ ಅರ್ಜಿ ಕಳುಹಿಸಬಹುದು. ವಿವರಗಳಿಗಾಗಿ- 08182-245721.
ಸಂತಾಪ
ಶಿವಮೊಗ್ಗ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಸರ್ಕಾರಿ ನೌಕರರ ಸಹಕಾರ ಸಂಘ ನಿಯಮಿತ ಸಂತಾಪ ಸೂಚಿಸಿದೆ. ಸಂಘದ ಅಧ್ಯಕ್ಷೆ ಪ್ರೇಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಒಂದು ನಿಮಿಷ ಮೌನಾ ಆಚರಿಸಲಾಯಿತು. ಈ ವೇಳೆ ಸಂಘದ ಉಪಾಧ್ಯಕ್ಷ ಡಿ.ಪ್ರಕಾಶ್, ನಿರ್ದೇಶಕ ಶಾಂತಪ್ಪ, ಪುಟ್ಟಪ್ಪ, ಎಚ್. ಪುಷ್ಪಾವತಿ, ನಾಗರಾಜ, ತಿಪ್ಪಾರೆಡ್ಡಿ, ಅಬ್ದುಲ್ ರಷೀದ್, ಅಶೋಕ್ ಕುಮಾರ್, ಈಶ್ವರಪ್ಪ, ಬಾಲರಾಜ್, ರವಿಕುಮಾರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.