ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಜ್ಞಾನ ಕ್ಷೇತ್ರದಲ್ಲಿ ದೇಶ ಇನ್ನಷ್ಟು ಅಭಿವೃದ್ಧಿಯಾಗಲಿ

Lingaraj Badiger
Updated On : 26 Dec 2013, 11:31 am

ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ. 25
ಬೇರೆ ದೇಶಕ್ಕೆ ಹೋಲಿಸಿದರೆ ಹೋಲಿಸಿದರೆ ಭಾರತ ವಿಜ್ಞಾನ ಕ್ಷೇತ್ರದಲ್ಲಿ ಬಹಳ ಹಿಂದಿದ್ದು, ಈ ನಿಟ್ಟಿನಲ್ಲಿ ಭಾರತ ವಿಜ್ಞಾನ, ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ಆಲೆಯನ್ಸ್ ವಿವಿಯ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಹೇಳಿದರು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಜೆಎನ್‌ಎನ್ ಸಿಇ ಕಾಲೇಜು ಆವರಣದಲ್ಲಿ ಬುಧವಾರ ವಿಶಿಷ್ಟ ಯೋಜನೆ ಇನ್ಸ್‌ಪೈರ್ ಇಂಟರ್ನ್‌ಶಿಪ್‌ನಿಂದ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರದಲ್ಲಿ ಅವರು, ಸರ್ಕಾರ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಮಹತ್ವದ ಕೆಲಸ: ಇತ್ತಿಚಿಗೆಷ್ಟೇ ಮಂಗಳಯಾನಕ್ಕೆ 450 ಕೋಟಿ ರುಪಾಯಿ ಖರ್ಚು ಮಾಡಿ ರಾಕೇಟ್ ನ್ನು ಕಳುಹಿಸಲಾಯಿತು. ಇದು ನಿಜವಾಗಿಯೂ ಮಹತ್ವದ ಕೆಲಸ. ಇಂದು ಫಲ ನೀಡದಿದ್ದರೂ, ಭವಿಷ್ಯದಲ್ಲಿ ಒಳ್ಳೆಯ ಫಲ ನೀಡಲಿದೆ. ಇದಕ್ಕೆ ಕೆಲ ಕಾಲ ಕಾಯುವುದು ಅನಿವಾರ್ಯ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಹೋಲಿಸಿದಲ್ಲಿ ನಮ್ಮ ದೇಶದ ಹಣ ಹೂಡಿಕೆ ಕಡಿಮೆ. ಆದರೆ, ಪ್ರತಿಫಲದ ದೃಷ್ಟಿಯಿಂದ ಪ್ರಗತಿ ಆಶಾದಾಯಕವಾಗಿದೆ. ಉದಾಹರಣೆಗೆ ಸಂಶೋಧನೆ ಮತ್ತು ಅಭಿವೃದ್ಧಿಗೆಂದು ಜಾಗತಿಕವಾಗಿ ಖರ್ಚಾಗುವ ಒಟ್ಟು ವಾರ್ಷಿಕ ಹಣದಲ್ಲಿ ಭಾರತದ ಪಾಲು ಶೇ.0.5 ಎಂದರು.
9ಕೋಟಿ ಯುವಕರು: ದೇಶದಲ್ಲಿ 17ರಿಂದ 27 ವಯಸ್ಸಿನ ಯುವಕರು 9 ಕೋಟಿ ಇದ್ದಾರೆ. ಅದು 2025ಕ್ಕೆ ಹತ್ತು ಕೋಟಿ ದಾಟಲಿದೆ. ಆದರೆ, ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಮಾತ್ರ ಕ್ಷೀಣ. ಈ ದೇಶಕ್ಕೆ ಯುವಕರ ಕೊಡುಗೆ ಅಪಾರವಾದದ್ದು ಎಂದರು.
ಈ ನಿಟ್ಟಿನಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು, 2025ಕ್ಕೆ ಭಾರತದ ಗಗನಯಾನಿ ಚಂದ್ರನ ನೆಲದ ಮೇಲೆ ಹಾಗೂ ಮಂಗಳ ಗ್ರಹದಲ್ಲಿ ಕಾಲೂರುತ್ತಾನೆ ಎಂಬ ಕನಸು ಕಂಡಿದ್ದರು. ಅದನ್ನು ಇಂದಿನ ಯುವಕರು ಈಡೇರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಇಂಡಿಯನ್ ಸ್ಟ್ಯಾಟಿಕಲ್ ಇನ್ಸ್ ಟಿಟ್ಯೂಟ್ ವಿಜ್ಞಾನಿ ಡಾ. ಶಿವ ಆತ್ರೇಯ, ಎನ್‌ಇಎಸ್ ಜಂಟಿ ಕಾರ್ಯದರ್ಶಿ ಎನ್.ಟಿ. ನಾರಾಯಣ ರಾವ್, ಕಾರ್ಯಾಗಾರದ ಸಂಯೋಜಕ ಡಾ. ಕೆ.ಎಲ್. ಶ್ರೀಪತಿ, ನಿರ್ದೇಶಕ ಡಾ.ಪಿ. ನಾರಾಯಣ್, ಕಾಲೇಜು ಪ್ರಾಂಶುಪಾಲ ಶ್ರೀನಿವಾಸ್ ರಾವ್ ಕುಂಟೆ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement