ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

30ರಂದು ಐವರಿಗೆ ಸನ್ಮಾನ

Vishwanath S
Updated On : 27 Dec 2013, 12:44 pm

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಡಿ.26
ಇಲ್ಲಿನ ವೈದಿಕ ಪರಿಷತ್ ಡಿ. 30ರಂದು ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವೇ.ಬ್ರ. ಕುಷ್ಟಗಿ ಹನುಮಂತಾಚಾರ್, ವೇ.ಬ್ರ. ಸಾಂಬಸದಾಶಿವ ಭಟ್ಟ, ವೇ.ಬ್ರ. ಶಿವರಾಮಕೃಷ್ಣ ಭಟ್ಟ, ವೇ.ಬ್ರ. ರಾಮಭಟ್ಟ ನಿವಣೆ ಅವರನ್ನು ಗೌರವಿಸಲಾಗುತ್ತಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಣೆ ನೀಡಿದ ಪರಿಷತ್ ಗೌರವಾಧ್ಯಕ್ಷ ಪ್ರೊ. ವಿ.ವಿ.ಎನ್. ಭಟ್, ಶೃಂಗೇರಿ ಶಂಕರ ಮಠದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಅಂದು ಬೆಳಗ್ಗೆ 7 ಗಂಟೆಗೆ ಧಾರ್ಮಿಕ ಪೂಜಾಕಾರ್ಯಗಳು ನಡೆಯಲಿವೆ. ಲೋಕ ಕಲ್ಯಾಣಾರ್ಥ ಮಹಾಗಣಪತಿ ಹೋಮ, ಗ್ರಹ ಯಜ್ಞ, ನವಚಂಡಿಕಾ ಹೋಮ, ವಾಯುಸ್ತುತಿ ಪುರಶ್ಚರಣೆ, 11 ಗಂಟೆಗೆ ಪೂರ್ಣಾಹುತಿ ನಡೆಯುವುದು. ನಂತರ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸನ್ಮಾನ ಸಮಾರಂಭದಲ್ಲಿ ವೈದಿಕ ಪರಿಷತ್ ಅಧ್ಯಕ್ಷ ವಿ.ಅ. ಶಂಕರಾನಂದ ಜೋಯ್ಸ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ. ವೆಂಕಟರಾವ್ ಶಂಕರಮಠದ ಧರ್ಮಾಧಿಕಾರಿ ಡಾ.ಪಿ. ನಾರಾಯಣ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು.
ಸದಸ್ಯತ್ವ ಅಭಿಯಾನ: 2003ರಲ್ಲಿ ಸ್ಥಾಪನೆಗೊಂಡ ವೈದಿಕ ಪರಿಷತ್ ಸಂಸ್ಥೆಯು ಶಿವಮೊಗ್ಗ ನಗರದಲ್ಲಿ ವೇಗ ಮಾರ್ಗ ಅನುಸರಿಸಿ ಬದುಕು ಸಾಗಿಸುತ್ತಿರುವ 500ಕ್ಕೂ ಹೆಚ್ಚು ವೈದಿಕ ಸದಸ್ಯರನ್ನೊಳಗೊಂಡ ಸಂಸ್ಥೆ. ಇಲ್ಲಿ ಹಿರಿ- ಕಿರಿಯರೆನ್ನದೆ ಋಗ್ವೇದ, ಯಜುರ್ವೇದ, ಸಾಮವೇದಗಳನ್ನೋದಿದ ಹಾಗೂ ವೇದಗಳೊಂದಿಗೆ ಶಾಸ್ತ್ರಜ್ಞರೂ ಆದ ಸಂಸ್ಕೃತಿ, ಪರಂಪರೆ ಉಳಿಸಿ-ಬೆಳೆಸಿಕೊಂಡು ಬರುತ್ತಿರುವ ನೂರಾರು ಸದಸ್ಯರಿದ್ದಾರೆ ಎಂದು ವಿ.ಎನ್. ಭಟ್ ವಿವರಿಸಿದರು.
ವಿದ್ವಾಂಸರುಗಳಿಂದ ಉಪನ್ಯಾಸ, ಸದಸ್ಯರ ಕಷ್ಟ- ಸುಖಗಳಲ್ಲಿ ಪಾಲ್ಗೊಳ್ಳುವಿಕೆ, ವಿದ್ವಾಂಸರನ್ನು ಗುರುತಿಸಿ ಗೌರವಿಸುವುದು, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ, ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಸದಸ್ಯರು ಅನಾರೋಗ್ಯಕ್ಕೆ ತುತ್ತಾದಾಗ ಸಹಾಯ ಇನ್ನಿತರ ಚಟುವಟಿಕೆಗಳಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.
ಪ್ರತಿವರ್ಷ ವಾರ್ಷಿಕೋತ್ಸವದಲ್ಲಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡುಬರುತ್ತಿದೆ. ಈಗಾಗಲೇ ಮಹಾರುದ್ರ, ನವಚಂಡಿ, ಶತನಾಳಿಕೇರ ಗಣಯಾಗ, ಲಲಿತಾ ಕೋಟ್ಯರ್ಚನೆ, ಆವಹಂತಿ ಹೋಮ, ಸಾಮೂಹಿಕ ಸತ್ಯನಾರಾಯಣ ವ್ರತ, ಮಹಾ ಸೌರಯಾಗ ಮುಂತಾದ ಕಾರ್ಯಕ್ರಮ ನಡೆಸಿದೆ. ಒಳ್ಳೆಯ ವಿಚಾರಗಳು ಎಲ್ಲೆಡೆಯಿಂದ ನಮ್ಮತ್ತ ಬರಲಿ ಎಂಬಂತೆ ಪರಿಷತ್ತಿನ ನ್ಯೂನಾತಿರೇಕ ಸರಿಪಡಿಸುವ ನಿಟ್ಟಿನಲ್ಲಿ, ಒಳ್ಳೆಯ ಸಲಹೆಗಳು ಯಾರಿಂದ ಬಂದರೂ ಅದಕ್ಕೆ ಸ್ವಾಗತವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಎನ್. ರವೀಂದ್ರ ಭಟ್, ರವಿಶಂಕರ ಭಟ್, ಸುಬ್ರಹ್ಮಣ್ಯ ಭಟ್ ರಾಘವೇಂದ್ರ ಭಟ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement