ಐವರು ದರೋಡೆಕೋರರ ಬಂಧನ
ಶಿವಮೊಗ್ಗ: ಗುಜರಿ ವ್ಯಾಪಾರಿ ಮನೆ ದರೋಡೆ ನಡೆಸಿದ್ದ ಗುಂಪಿನ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಿಯಾಜ್ (32), ಸಲೀಂ (29), ಇಲಿಯಾಸ್ (25), ನಿಯಾದ್ (19) ಹಾಗೂ ಅಶ್ಪಕ್ (22) ಬಂಧಿತ ಆರೋಪಿಗಳು. ಪ್ರಕರಣದ ಮುಖ್ಯ ಆರೋಪಿ ಸಲೀಂ ಹಾಗೂ ಇತರೆ ಇಬ್ಬರು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಕಾರು, ಬೈಕ್, ಮೂರು ಮಚ್ಚು, ಎರಡು ಚಾಕು, ಖಾರದಪುಡಿ ಪ್ಯಾಕೇಟ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ದೊಡ್‌ಡಪೇಟೆ ಠಾಣೆ ಸಿಪಿಐ ಶಿವಕುಮಾರ್, ಎಸ್‌ಐ ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ಆರ್‌ಎಂಎಲ್ ನಗರದ ಗುಜರಿ ವ್ಯಾಪಾಲಿ ಸಲೀಮುಲ್ಲಾ ಅವರ ಮನೆಯಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳು ಒಂದು ದಿನ ಬೆಳಿಗ್ಗೆ ಎಂಟು ಯುವಕರ ತಂಡವು ಇವರ ಮನೆಯನ್ನು ಅಕ್ರಮವಾಗಿ ಪ್ರವೇಶಿಸಿ, ಬೆದರಿಸಿ ಹಣ ನೀಡುವಂತೆ ಒತ್ತಾಯಿಸಿದ್ದರು. ಆದರೆ ನಗನಾಣ್ಯ ಸಿಗದೇ ಬರಿಗೈಯಲ್ಲಿ ವಾಪಸಾಗಿದ್ದರು. ದೊಡ್‌ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಮಂಗಳೂರಿನಲ್ಲಿ ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.