ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಖಾತ್ರಿ ಯೋಜನೆ ಫಲಾನುಭವಿಗಳಿಗೆ ಕಾರ್ಡ್ ವಿತರಣೆ

Vishwanath S
Updated On : 27 Dec 2013, 12:43 pm

ಕ.ಪ್ರ.ವಾರ್ತೆ  ಶಿರಾಳಕೊಪ್ಪ  ಡಿ.26
ರಾಮರಾಜ್ಯ- ಗ್ರಾಮರಾಜ್ಯ ಕನಸನ್ನು ಬೇರೆ ಯಾರೋ ಮಾಡಬೇಕು ಎಂಬುದನ್ನು ಬಿಟ್ಟು ಅದನ್ನು ನಾವೇ ಮಾಡೋಣ ಎಂದು ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿದರು.
ಶಿರಾಳಕೊಪ್ಪ ಹತ್ತಿರದ ಐತಿಹಾಸಿಕ ಕ್ಷೇತ್ರ ಬಳ್ಳಿಗಾವಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಿಲ್ಲೆಯ ಪಪಂ ಪ.ಜಾತಿಯ ಒಂದೇ ದಿನ ಹದಿಮೂರು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ವೈಯಕ್ತಿಕ ಕಾರ್ಡ್ ವಿತರಣೆಯ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಚಾಲನೆ, ಬಳ್ಳಿಗಾವಿ ಗ್ರಾಪಂ ನಿರ್ಮಿಸಿರುವ ಮಾರಾಟ ಮಳಿಗೆ, ತೊಗರ್ಸಿ ಜಿಪಂ ಕ್ಷೇತ್ರದ ಎಲ್ಲ ಶಾಲೆಗಳ ಕುಡಿಯುವ ನೀರಿನ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಪಂ ಸದಸ್ಯ ದಾನೇರ್ ರುದ್ರಪ್ಪ ಮಾತನಾಡಿದರು.ಜಿಪಂ ಉಪ- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೋಪಾಲ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಬಳ್ಳಿಗಾವಿ ಗ್ರಾಪಂ ಅಧ್ಯಕ್ಷ ಜಿ.ರಾಮಣ್ಣ ವಹಿಸಿ ಮಾತನಾಡಿದರು. ತಾಪಂ ಅಧ್ಯಕ್ಷೆ ಲೀಲಾವತಿ ಲಕ್ಷ್ಮಣ ತಾಪಂ ಸದಸ್ಯ ಈಶ್ವರಪ್ಪ, ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ರಮೇಶ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಡಾ. ಚಂದ್ರಶೇಖರ್, ಜಿಪಂ ಎಂಜಿನಿಯರ್ ಆಶೀಫ್ ಅಲಿ, ಶಿರಾಳಕೊಪ್ಪ ಪಪಂ ಮಾಜಿ ಅಧ್ಯಕ್ಷರಾದ ಚಂದ್ರಶೇಖರ, ರಟ್ಟಿಹಳ್ಳಿ ಲೋಕೇಶ್, ಎಪಿಎಂಸಿ ನಿರ್ದೇಶಕ ನಾಗರಾಜ್, ಮಂಚಿ ಶಿವಣ್ಣ ಇದ್ದರು. ಗ್ರಾಪಂ ಸದಸ್ಯ ಪಾಲಾಕ್ಷಪ್ಪ ಸ್ವಾಗತಿಸಿದರು. ಸಿಆರ್‌ಪಿ ಚಂದ್ರಾನಾಯ್ಕ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement