ನಾಳೆ ಸದಸ್ಯರ ಸಭೆ
ಶಿವಮೊಗ್ಗ: ಜಿಲ್ಲಾ ಆದಿ- ದ್ರಾವಿಡ ರಕ್ಷಣಾ ಸಮಿತಿ ಡಿ.29ರಂದು ಬೆಳಿಗ್ಗೆ 10 ಗಂಟೆಗೆ ಹಸೂಡಿಫಾರಂ ಗ್ರಾಮದಲ್ಲಿ ಗ್ರಾಮಾಂತರ ಶಾಖೆಯ ಸದಸ್ಯರ ಸಭೆ ಏರ್ಪಡಿಸಿದೆ. ಪರಿಶಿಷ್ಟ ಜಾತಿಗೆ ಸೇರಿದ ಆದಿ-ದ್ರಾವಿಡರ ಸಮಸ್ಯೆಗಳು, ಹಕ್ಕು ಹಾಗೂ ಬೇರೊಬ್ಬರಿಂದ ದೌರ್ಜನ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಸಮುದಾಯದ ಬಗ್ಗೆ ತೆಗೆದುಕೊಂಡಿರುವ ಆದೇಶಗಳನ್ನು ಜಾರಿಗೊಳಿಸದಿರುವುದು, ಸಂವಿಧಾನದ ಹಕ್ಕುಗಳನ್ನು ನೀಡದೆ ಇರುವ ಅಧಿಕಾರಿಗಳ ಮತ್ತು ರಾಜಕಾರಣಿಗಳ ನಿರ್ಲಕ್ಷ್ಯಗಳನ್ನು ಕುರಿತು ಚರ್ಚಿಸಲು ಈ ಸಭೆ ನಡೆಸಲಾಗುವುದು. ಆದಿ-ದ್ರಾವಿಡ ಜನಾಂಗದವರು ಪಾಲ್ಗೊಳ್ಳುವಂತೆ ಸಮಿತಿಯ ಗ್ರಾಮಾಂತರ ಅಧ್ಯಕ್ಷ ಎಂ.ಮುನಿಯನ್ ತಿಳಿಸಿದ್ದಾರೆ. ವಿವರಗಳಿಗಾಗಿ-9972720102.