ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಭ್ರಷ್ಟಾಚಾರಿಗಳು ಬಿಜೆಪಿ ಸೇರಿದರೆ ನೈತಿಕ ಅಧಃಪತನ'

Lingaraj Badiger
Updated On : 28 Dec 2013, 10:58 am

ಸೊರಬ: ಹಗರಣಗಳನ್ನು ಹೊತ್ತವರು ಬಿಜೆಪಿಗೆ ಸೇರ್ಪಡೆಯಾದರೆ ನೈತಿಕ ಅಧಃಪತನ ವಾದೀತು ಎಂದು ತಾಲೂಕು ಬಿಜೆಪಿ ಹಿರಿಯ ಮುಖಂಡ ಪ್ರಭಾಕರ ರಾಯ್ಕರ್ ಎಚ್ಚರಿಸಿದ್ದಾರೆ. ನರೇಂದ್ರ ಮೋದಿಯವರ ಆಡಳಿತದಲ್ಲಿ ಗುಜರಾತ್ ಅಭಿವೃದ್ಧಿಯ ಉತ್ಕೃಷ್ಟಕ್ಕೇರಿ, ಭ್ರಷ್ಟಾಚಾರ ಪೂರ್ಣ ತೊಲಗಿ ಗಮನಸೆಳೆದಿದ್ದು, ಇದಕ್ಕೆ ಉತ್ತರವಾಗಿ ಮತದಾರ ಬಂಧುಗಳು ಭ್ರಷ್ಟಾಚಾರದ ವಿರುದ್ಧ ನೇರ ಸಮರ ಸಾರಿದ್ದು ಸ್ಪಷ್ಟವಾಗಿದೆ. ಹೀಗಿದ್ದೂ ಹಗರಣಗಳ ಮೂಟೆ ಹೊತ್ತವರಿಗೆ ಮತ್ತೆ ಬಿಜೆಪಿ ಪಕ್ಷ ಮಣೆ ಹಾಕುವುದರಿಂದ ಪಕ್ಷದ ನೈತಿಕ ಅಧಃಪತನವಾಗುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ವಿಪತ್ತು
ಕಡಿಮೆಗೊಳಿಸುವ ದಿನಾಚರಣೆ: ರ್ಯಾಲಿ
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಗೃಹರಕ್ಷಕದಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಆಶ್ರಯದಲ್ಲಿ ಡಿ. 28ರಂದು ಬೆಳಿಗ್ಗೆ 8.30ಕ್ಕೆ ಸೈನ್ಸ್ ಮೈದಾನದಲ್ಲಿ ರ್ಯಾಲಿ ನಡೆಯಲಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರಕುಮಾರ್ ರ್ಯಾಲಿ ಉದ್ಘಾಟಿಸುವರು.  ಬೆಳಿಗ್ಗೆ 8.30ಕ್ಕೆ ಸೈನ್ಸ್ ಮೈದಾನದಿಂದ ನೆಹರೂ ಕ್ರೀಡಾಂಗಣದವರೆಗೆ ರ್ಯಾಲಿ ನಡೆಯಲಿದೆ. ನಂತರ ಗೃಹರಕ್ಷಕ, ಅಗ್ನಿಶಾಮಕ ಮತ್ತು ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಸುರಕ್ಷತೆಯ ಬಗ್ಗೆ ಪ್ರಾತ್ಯಕ್ಷತೆ ನಡೆಯಲಿದೆ. ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಆಗಮಿಸುವರು. ಗೃಹರಕ್ಷಕದಳದ ಸಮಾದೇಷ್ಟ ಎಸ್. ಶಿವಕುಮಾರ್ ಅಧ್ಯಕ್ಷತೆ ವಹಿಸುವರು.
ಕಾರ್ಯಾಗಾರ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲೆಯ ಅನುದಾನರಹಿತ ಪ್ರಾಥಮಿಕ ಶಾಲಾ ಶಿಕ್ಷಕರು, ವಿವಿಧ ಹಂತದ ಜನಪ್ರತಿನಿಧಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆ-2009ರ ಕುರಿತು ಡಿ.27ರಿಂದ ಜ.4 ರವರೆಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ 1 ದಿನದ ತರಬೇತಿ ಕಾರ್ಯಾಗಾರ ಏರ್ಪಡಿಸಲು ಉದ್ದೇಶಿಸಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಾಗಾರ ನಡೆಸಲು ಸೂಚಿಸಲಾಗಿದೆ. ಜನವರಿ 2ನೇ ವಾರದಲ್ಲಿ ಎರಡನೇ ಹಂತದಲ್ಲಿ ತಾಲೂಕು ಹಂತದ ವಿವಿಧ ಚುನಾಯಿತ ಪ್ರತಿನಿಧಿಗಳಿಗೆ ಒಂದು ದಿನದ ಆರ್.ಟಿ.ಇ. ತರಬೇತಿ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹರಕೆರೆ ಬಳಿ ಕೆನರಾ ಬ್ಯಾಂಕ್‌ನ 63ನೇ ಎಟಿಎಂ ಉದ್ಘಾಟನೆ
ಶಿವಮೊಗ್ಗ: ಇಲ್ಲಿನ ಹರಕೆರೆ ಸಮೀಪದ ಸಹ್ಯಾದ್ರಿ ನಾರಾಯಣ ಹೃದಯಾಲಯದ ಮುಂಭಾಗ ಕೆನರಾ ಬ್ಯಾಂಕಿನ 63ನೇ ಎ.ಟಿ.ಎಮ್ ಕೇಂದ್ರವನ್ನು ಕೆನರಾ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ಎಮ್.ಎಮ್.ಚಿನಿವಾರ್ ಉದ್ಘಾಟಿಸಿರು.
ಗ್ರಾಹಕರ ಅನುಕೂಲಕ್ಕಾಗಿ ಕೆನರಾ ಬ್ಯಾಂಕ್ ಮಾರ್ಚ್ ಅಂತ್ಯದ ವೇಳೆಗೆ 100 ಎಟಿಎಂ ಕೇಂದ್ರ ಹಾಗೂ 22 ಕ್ಯಾಷ್ ಡಿಪಾಸಿಟ್ ತಂತ್ರವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಸಹ್ಯಾದ್ರಿ ನಾರಾಯಣ ಹೃದಯಾಲಯದ ಸೌಲಭ್ಯ ನಿರ್ದೇಶಕ ಡಾ. ಶ್ರೀನಿವಾಸ್ ಕರೆ, ಕೆನರಾ ಬ್ಯಾಂಕಿನ ನೆಹರು ರಸ್ತೆ ಶಾಖೆಯ ಮುಖ್ಯ ಪ್ರಬಂಧಕ ಎಂ.ಜಿ. ಪಂಡಿತ್, ಬ್ಯಾಂಕಿನ ಮಾರ್ಕೆಟಿಂಗ್ ವಿಭಾಗದ ಸಹಾಯಕ ಮಹಾ ಪ್ರಬಂಧಕ ಸತ್ಯ ಪ್ರಕಾಶ್, ಲೀಡ್ ಬ್ಯಾಂಕಿನ ಸುಬ್ಬರಾವ್ ಮತ್ತಿತರ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement