ಸಂಕ್ರಾಂತಿಗೆ ಗೊಂದಲ ನಿವಾರಣೆ; ಬಿವೈಆರ್
ಶಿವಮೊಗ್ಗ: ಬಿಜೆಪಿ-ಕೆಜೆಪಿ ಕುರಿತಾಗಿ ಕೊನೆಗೂ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ ಹೊರಹಾಕಿದ್ದು, ಐದಾರು ತಿಂಗಳಿನಿಂದ ಕೇಳಿ ಬರುತ್ತಿರುವ ಬಿಜೆಪಿ-ಕೆಜೆಪಿ ಕುರಿತಾಗಿನ ಗೊಂದಲ ಈ ವರ್ಷದಲ್ಲೇ ಬಗೆಹರಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಸಂಕ್ರಾಂತಿ ವೇಳೆಗೆ ಎಲ್ಲ ಸಂಗತಿಗಳು ನಿಚ್ಚಳವಾಗಲಿವೆ. ಆರೇಳು ತಿಂಗಳುಗಳಿನಿಂಲೂ ಬಿಜೆಪಿ ಜೊತೆ ಕೆಜೆಪಿ ವಿಲೀನ ಅಥವಾ ಸ್ಥಾನ ಹೊಂದಾಣಿಕೆ ಇತ್ಯಾದಿ ಸಂಗತಿಗಳು ಸಾರ್ವಜನಿಕವಾಗಿ, ಮಾಧ್ಯಮಗಳಲ್ಲಿ ಚರ್ಚಾ ವಿಷಯವಾಗಿವೆ. ಈ ಬಗ್ಗೆ ಪಕ್ಷದೊಳಗೂ ಸಹ ಸಾಕಷ್ಟು ಚರ್ಚೆ ನಡೆದಿವೆ ಎಂದರು.
ಲೋಹಿತ್ ಆಯ್ಕೆ
ತರೀಕೆರೆ: ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯರನ್ನಾಗಿ ಪಕ್ಷದ ಮುಖಂಡರಾದ ಮುದುಗುಂಡಿ ಎಂ. ಆರ್. ಲೋಹಿತ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ ಅವರು ನೇಮಕ ಮಾಡಿದ್ದಾರೆ.