ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅರಿಶಿಣ ಲಾಭಕ್ಕೆ ಮಾಹಿತಿ ಅವಶ್ಯ: ಡಾ.ಲಕ್ಷ್ಮೀಕಾಂತ್

Vishwanath S
Updated On : 30 Dec 2013, 12:17 pm

ಶಿವಮೊಗ್ಗ: ಅರಿಶಿಣ ಬೆಳೆ ಬಹು ಲಾಭದಾಯಕ ಬೆಳೆಯಾಗಿದೆ. ರೈತರು ಅಗತ್ಯ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಪಡೆದು ಹೆಚ್ಚು ಇಳುವರಿ ಪಡೆಯಬೇಕು ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀಕಾಂತ್ ಹೇಳಿದರು.
ನವಿಲೆಯ ಕೃಷಿ ವಿಜ್ಞಾನ ಕೇಂದ್ರ ತಾಲೂಕಿನ ವೀರಣ್ಣನ ಬೆನವಳ್ಳಿ ಗ್ರಾಮದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಸೋಮಶೇಖರಪ್ಪ ಅವರ ತಾಕಿನಲ್ಲಿ ಆಯೋಜಿಸಿದ್ದ ಅರಿಶಿಣ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು, ಅರಿಶಿಣ ಬೆಳೆಯ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದಿಂದ ತಾಂತ್ರಿಕ ಮಾಹಿತಿ ಪಡೆದು ಆಧುನಿಕ ಬೇಸಾಯ ಕ್ರಮಗಳನ್ನು ಅನುಸರಿಸಿ ರೈತರು ಹೆಚ್ಚಿನ ಆದಾಯ ಪಡೆಯಬೇಕು. ಇಲಾಖೆಯಿಂದ ದೊರೆಯುವ ವಲತ್ತುಗಳನ್ನು ಬಳಸಿಕೊಳ್ಳಬೇಕು ಎಂದರು. ರೈತ ಮುಖಂಡ ರಾಜು ಹಿಟ್ಟೂರು ಮಾತನಾಡಿ, ಬೆಳೆ ಸಂಸ್ಕರಣೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ ಹಾಗೂ ಸರಿಯಾದ ಬೆಲೆ ದೊರೆತಾಗ ಮಾತ್ರ ತೋಟಗಾರಿಕಾ ಬೆಳೆಗಳಲ್ಲಿ ಲಾಭ ಮಾಡಲು ಸಾಧ್ಯ ಎಂದರು. ವಿಷಯ ತಜ್ಞ ಡಾ.ನಾಗರಾಜಪ್ಪ ಅಡಿವಪ್ಪರ್, 9 ಅರಿಶಿಣದ ವಿವಿಧ ತಳಿಗಳ ವಿವರ ಹಾಗೂ ಅರಿಶಿಣ ಬೆಳೆಯ ಸಮಗ್ರ ಬೇಸಾಯದ ಬಗ್ಗೆ ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಿದರು. ಕಾರ್ಯಕ್ರಮ ಸಂಯೋಜಕ ಡಾ. ಬಿ.ಸಿ. ಹನುಮಂತಸ್ವಾಮಿ, ಹಾಪ್‌ಕಾಮ್ಸ್ ಅಧ್ಯಕ್ಷ ಸೋಮಶೇಖರಪ್ಪ, ಕೊನಗವಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಜಿ.ದಾನಪ್ಪ, ರೈತ ಮುಖಂಡ ಸಣ್ಣ ವೀರಪ್ಪ, ಪಿ.ಡಿ. ಮಂಜಪ್ಪ, ಎ.ಎನ್. ನಾಗರಾಜ್, ವೀರಣ್ಣನ ಬೆನವಳ್ಳಿ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮದ 45ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement