ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗ್ರಾಮೀಣ ಮಕ್ಕಳ ಕೀಳರಿಮೆ ಹೊಗಲಾಡಿಸಿ: ಕೂಡಿಗೆ

Vishwanath S
Updated On : 30 Dec 2013, 12:16 pm

ಸಾಗರ: ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಜತೆಗೆ ಕನ್ನಡ ಮಾಧ್ಯಮದ ಮಕ್ಕಳನ್ನು ಕಲೆತು ಆಡಲು ಬಿಡಬೇಕು. ಪರಸ್ಪರ ಕೊಡು-ಕೊಳ್ಳುವ ಅವಕಾಶ ನಿರ್ಮಿಸಬೇಕು. ಗ್ರಾಮೀಣ ಮಕ್ಕಳ ಕೀಳರಿಮೆ ಹೋಗಲಾಡಿಸುವ ನಿಟ್ಟಿನಲ್ಲಿ ಶಾಲಾ ಹಂತದಿಂದಲೇ ಚಟುವಟಿಕೆ ಪ್ರಾರಂಭವಾಗಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ ೃತ ಸಾಹಿತಿ ಡಾ.ಶ್ರೀಕಂಠ ಕೂಡಿಗೆ ಹೇಳಿದರು.
ಇಲ್ಲಿನ ವರದಹಳ್ಳಿ ರಸ್ತೆಯ ರಾಧಾಕೃಷ್ಣ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಬಾಳೆಹಣ್ಣು ಉಬ್ಬೆ ಹಾಕಿದಂತೆ ಕೂಡಿ ಹಾಕಲಾಗುತ್ತದೆ. ಆದರೆ, ಮಲೆನಾಡಿನ ಶಾಲೆಗಳು ಸುಖೀ ಶಾಲೆಗಳು. ಮಕ್ಕಳ ಬುದ್ಧಿ ಸಾಮಾರ್ಥ್ಯಕ್ಕೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಭಾವ ಸಾಮರ್ಥ್ಯಕ್ಕೆ ಸಹ ಹೆಚ್ಚಿನ ಒತ್ತು ನೀಡಬೇಕು. ಸೈಬರ್ ಕ್ರೈಂನಲ್ಲಿ ಮಕ್ಕಳು ತೊಡಗದಂತೆ ಇಂದಿನ ಪೋಷಕರು ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದರು.
ಇಂದು ತಂದೆ-ತಾಯಿ, ಗುರುಗಳ ಸಾಧನೆ ಮೀರಿಸಬಲ್ಲ ಸಾಧನೆ ಮಾಡುವ ಪ್ರತಿಭಾನ್ವಿತ ಮಕ್ಕಳು ನಮ್ಮ ನಡುವೆ ಇದ್ದಾರೆ. ಬೇರೆ ಬೇರೆ ಕ್ಷೇತ್ರಗಳ ಸಾಧನೆಯನ್ನು ಮೀರುವ ಅಸಾಧಾರಣ ಪ್ರತಿಭಾ ಸಂಪನ್ನ ಮಕ್ಕಳ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡಬೇಕು ಎಂದು ಹೇಳಿದರು.
ಶಾಲೆ ಆಡಳಿತ ಮಂಡಳಿ ವತಿಯಿಂದ ಶ್ರೀಕಂಠ ಕೂಡಿಗೆ ಅವರನ್ನು ಅಭಿನಂದಿಸಲಾಯಿತು. ಶಾಲೆಯ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು. ಬಾಲಭವನ ಸಮಿತಿಯ ಕೆ.ವಿ. ಕೃಷ್ಣಮೂರ್ತಿ, ಮತ್ತಿಕೊಪ್ಪ ರಘುಪತಿರಾವ್, ಆರ್.ಎಂ. ಬಾಪಟ್, ಪರಮಾತ್ಮ ಹಾಜರಿದ್ದರು.
ಪ್ರಾಚಾರ್ಯ ಗೋಪಾಲ ಜಿ. ಸ್ವಾಗತಿಸಿದರು. ಲಕ್ಷ್ಮೀ ಎನ್.ವಿ. ಪ್ರಾಸ್ತಾವಿಕ ಮಾತನಾಡಿದರು. ಸೋನಿಯಾ ಮ್ಯಾಥ್ಯೂ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement