ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಎಸ್‌ಎಸ್ ವಿಚಾರಧಾರೆ ಸಮಾಜಕ್ಕೆ ಬುನಾದಿ

Vishwanath S
Updated On : 30 Dec 2013, 12:15 pm

ಕ.ಪ್ರ.ವಾರ್ತೆ ಟಿ ಸೊರಬ ಟಿ ಡಿ.29
ಉನ್ನತ ಪರಿಕಲ್ಪನೆಗಳು, ಭಾವಪೂರ್ಣ ಅನಾವರಣ ಕವಿಗಳಿಂದ ಮಾತ್ರ ಸಾಧ್ಯ, ಈ ಸಾಲಿನಲ್ಲಿ ಶಿವರುದ್ರಪ್ಪನವರ ವಿಚಾರಧಾರೆಗಳು, ಮಾನವೀಯ ಮೌಲ್ಯಗಳು ಸದೃಢ ಸಮಾಜಕ್ಕೆ ಬುನಾದಿಯಾಗಿವೆ. ಪರಿಪಕ್ವ ಮನಸ್ಸಿನ ಕಲ್ಪನೆಗಳಾಗಿವೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮಿಗಳು ತಿಳಿಸಿದರು.
ಪಟ್ಟಣದ ಮುರುಘಾಮಠ ಆವರಣದಲ್ಲಿ ವೀರಶೈವ ಸಮಾಜದಿಂದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯತ್ವದ ತತ್ವಗಳ ಹಣತೆಯನ್ನು ಹಚ್ಚಿದ ಕವಿ ಜಿಎಸ್‌ಎಸ್ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರೇಮ ಬಾಂಧವ್ಯ ಬೆಸೆದವರು ಎಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಇಂದೂಧರ ಒಡೆಯರ್ ತಿಳಿಸಿದರು.
ಜಿಎಸ್‌ಎಸ್ ಶಾರೀರಿಕವಾಗಿ ನಮ್ಮೊಂದಿಗಿಲ್ಲ. ಆದರೆ, ಅವರ ಭಾವಗೀತೆಗಳು ಎಂದಿಗೂ ಜನಮನದಲ್ಲಿ ಜೀವಂತವಾಗಿರುತ್ತವೆ ಎಂದು ವಕೀಲ ಎಂ.ನಾಗಪ್ಪ ಹೇಳಿದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಕೆ.ಆಚಾರ್, ಕೃಷಿಕ ಬಸವರಾಜಗೌಡ ಮಾತನಾಡಿದರು. ಕೋಲ್ಗುಣಸಿ ನಂದಿನಿ ಜಯಪ್ರಕಾಶ್, ಲಯನ್ಸ್ ಜಿಲ್ಲಾ ಆರೋಗ್ಯ ಸಂಯೋಜಕ ನಾಗರಾಜಗೌಡ, ನಿಜಗುಣ, ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement