ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ತಾಳಗುಂದ ಉತ್ಸವವೂ ಜನಪ್ರಿಯವಾಗಲಿ

Vishwanath S
Updated On : 30 Dec 2013, 12:15 pm

ಕ.ಪ್ರ.ವಾರ್ತೆ ,  ಶಿರಾಳಕೊಪ್ಪ ,  ಡಿ. 29
ಐತಿಹಾಸಿಕ ಸ್ಥಳ ತಾಳಗುಂದ ಇತಿಹಾಸ ಇಲ್ಲಿಯ ಜನರಿಗೆ ತಿಳಿದಿಲ್ಲ, ಹಂಪಿ,  ಕೆಳದಿ, ಬನವಾಸಿ ಉತ್ಸವದಂತೆ ಈ ಉತ್ಸವ ಆಚರಣೆ ಮುಖಾಂತರ ತಾಳಗುಂದ ಇತಿಹಾಸ ಎಲ್ಲರಿಗೂ ತಿಳಿಯುವಂತೆ ಮಾಡಬೇಕು ಎಂದು ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಹೇಳಿದರು.
ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಶಿರಾಳಕೊಪ್ಪ ಮತ್ತು ತಾಳಗುಂದ ಕದಂಬ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಷಾದ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನ ಕರ್ನಾಟಕದ ಹಲವಾರು ಕ್ಷೇತ್ರಗಳ ಅಭಿವೃದ್ಧಿ ಮಾಡುವುದರೊಂದಿಗೆ ತಾಲೂಕಿನ ಎಲ್ಲಾ ಅಭಿವೃದ್ಧಿ ಕಡೆ ಗಮನ ಹರಿಸಿದರು. ಆದರೆ ಶಿಕಾರಿಪುರ ತಾಲೂಕಿನ ಹಾಗೂ  ಇಲ್ಲಿಯ ಜನರು, ಕನ್ನಡದ ಬಗ್ಗೆ ಕಾಳಜಿ ಇರುವವರು ಅವರ ಗಮನಕ್ಕೆ ತಾರದಿರುವುದರಿಂದ ಈ ಕ್ಷೇತ್ರ ಹಿಂದೆ ಉಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮೈಸೂರು ಮಹಾರಾಣಿ ಕಾಲೇಜು ಕನ್ನಡ ಉಪನ್ಯಾಸಕ ಬಿ.ವಿ. ವಸಂತಕುಮಾರ ಮಾತನಾಡಿ, ಶಿಕಾರಿಪುರ ತಾಲೂಕಿನ ತಾಳಗುಂದ, ಬಂದಳಿಕೆ, ಬಳ್ಳಿಗಾವಿ ಇವುಗಳಲ್ಲಿ ನಮ್ಮ ಸಂಸ್ಕ್ರತಿ, ಚರಿತ್ರೆ, ಇತಿಹಾಸ ಅಡಗಿದ್ದು, ಇಡೀ ಜಗತ್ತಿಗೆ ಇತಿಹಾಸದ ಮೂಲ ಸಾಮಗ್ರಿಗಳನ್ನು  ಕೊಟ್ಟ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.  
ತಾಳಗುಂದದಲ್ಲಿಯ ಪ್ರಣವಲಿಂಗೇಶ್ವರ ಶಿವಲಿಂಗ ವಿಶೇಷವಾದದ್ದು, ಕಾರಣ ದೇಶದಲ್ಲಿ ಇರುವಂತಹ ಶಿವಲಿಂಗಕ್ಕೂ ಇಲ್ಲಿಯ ಶಿವಲಿಂಗಕ್ಕೂ ಬಹಳ ವ್ಯತ್ಯಾಸವಿದೆ ಇಲ್ಲಿಯ ಶಿವಲಿಂಗ ಪ್ರಣವ (ಓಂ)ಎಂಬುದು ಎಲ್ಲಿಯೂ ಇಲ್ಲ, ಇಲ್ಲಿಯ ಇತಿಹಾಸ ಪುಸ್ತಕದಲ್ಲಿ ಇದ್ದರೆ ಸಾಲದು, ಜನರಿಗೆ ಇಲ್ಲಿಯ ಸಂಗತಿ ತಿಳಿಯಬೇಕು ಎಂದರು.
ತಹಸೀಲ್ದಾರ್ ಧರ್ಮೋಜಿರಾವ್ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ನವೀನಕುಮಾರ್ ಹಿಸಿದ್ದರು. ಶಿರಾಳಕೊಪ್ಪದ ಸಿದ್ದೇಶ್ವರ ಶ್ರೀ ಕಾರ್ಯಕ್ರಮ ಸಾನಿಧ್ಯವಹಿಸಿ ಮಾತನಾಡಿದರು.
 ಸಮ್ಮೇಳನಾಧ್ಯಕ್ಷ ಮಹದೇವಪ್ಪ, ಬಳಗಾರ್ ಜಿಪಂ ಸದಸ್ಯ ರುದ್ರಪ್ಪ ದಾನೇರ್, ಬಂಗಾರ್ ನಾಯ್ಕ್, ಜಿಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ, ವಾರ್ತಾಇಲಾಖೆ ಉಪ- ನಿರ್ದೇಶಕ  ಹೀಮಂತರಾಜು, ಪತ್ರಕರ್ತಸಂಘದ ಅಧ್ಯಕ್ಷ ಹುಚ್ಚರಾಯಪ್ಪ, ಬಸವರಾಜ್, ಗ್ರಾಪಂ ಅಧ್ಯಕ್ಷ ಜಯಪ್ಪ ಸೇರಿದಂತೆ ಹಲವರು ಪ್ರಮುಖರು ಇದ್ದರು.
ಮಯೂರ ಜ್ಯೋತಿಗೆ ಸ್ವಾಗತ
ಶಿರಾಳಕೊಪ್ಪ:   ತಾಳಗುಂದ ಉತ್ಸವಕ್ಕೆ ತರಲಾದ ಮಯೂರ ಜ್ಯೋತಿಯನ್ನು ಡಿ.28ರಂದು ಬೆಳಗ್ಗೆ ಶಿರಾಳಕೊಪ್ಪ ಪಟ್ಟಣದಲ್ಲಿ ಶಾಲಾ -ಕಾಲೇಜು ವಿದ್ಯಾರ್ಥಿಗಳು ಸ್ವಾಗತಿಸಿ, ತಾಳಗುಂದಕ್ಕೆ ಬೀಳ್ಕೊಟ್ಟರು.
ತಾಳಗುಂದ ಉತ್ಸವದಲ್ಲಿ ವೇದಿಕೆ ಕಾರ್ಯಕ್ರಮ ಬಳಿಕ ಫಕ್ಕೀರಪ್ಪ ಭಜಂತ್ರಿ ಅವರಿಂದ ಗಾಯನ, ಭದ್ರಾವತಿ ಚಿಂತನ ಕಲಾವೃಂದದಿಂದ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement