ಸಾಮಾಜಿಕ, ಆರ್ಥಿಕ, ಜಾತಿಗಣತಿ: ಆಕ್ಷೇಪಣೆ ಆಹ್ವಾನ
ಶಿವಮೊಗ್ಗ: ನಗರಸಭೆಯ ವ್ಯಾಪ್ತಿಯೊಳಗಿನ 35 ವಾರ್ಡ್ಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ ಕಾರ್ಯ್ನ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಿ ಅದರ ಕರಡು ಪ್ರತಿಯನ್ನು ಆಯಾಯ ವಾರ್ಡ್ಗಳಲ್ಲಿ ಸಾರ್ವಜನಿಕರ ತಿಳಿವಳಿಕೆಗಾಗಿ ಪ್ರಕಟಿಸಲಾಗಿತ್ತು. ಸಾರ್ವಜನಿಕರು ಈ ಕರಡು ಪಟ್ಟಿ ಪರಿಶೀಲಿಸಿ, ತಮ್ಮ ಕುಟುಂಬದ ಸದಸ್ಯರ ಹೆಸರುಗಳು ಕೈಬಿಟ್ಟು ಹೋದಲ್ಲಿ, ತಪ್ಪಾಗಿ ಮುದ್ರಣಗೊಂಡಲ್ಲಿ ಅಥವಾ ಮನೆ ಬೀಗ ಹಾಕಿದ ಪಕ್ಷದಲ್ಲಿ ಸದಸ್ಯರ ಹೆಸರನ್ನು ಸೇರ್ಪಡೆಗೊಳಿಸಲು ನಿಗದಿತ ನಮೂನೆಯಲ್ಲಿ ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಶಿವಮೊಗ್ಗ ನಗರದ 6 ಮತ್ತು 7ನೇ ವಾರ್ಡ್ನವರು ಜಿ.ಪರಮೇಶ್ ಮೊ.94482-56167, ಸೂಡಾ ಕಚೇರಿ ಸಭಾಂಗಣದಲ್ಲಿ, 5 ಮತ್ತು 16ನೇ ವಾರ್ಡ್ನವರು ಡಿ.ಮಂಜುನಾಥ್ ಮೊ.99863-82474 ಗೋಪಾಳದ ಕ್ರೀಡಾ ಭವನದಲ್ಲಿ, 28 ಮತ್ತು 29ನೇ ವಾರ್ಡ್ನವರು ಸಿ.ಜಿ.ಗಂಗಾಧರ್ ಮೊ.97413-16572 ಎನ್.ಟಿ. ರಸ್ತೆಯ ಸರ್ಕಾರಿ ಉರ್ದು ಶಾಲೆಯಲ್ಲಿ, 17, 18 ಮತ್ತು 26ನೇ ವಾರ್ಡ್ನವರು ಎಸ್. ಸಾದಿಕ್ವುಲ್ಲಾ- ಮೊ.99640-62768, ದುರ್ಗಿಗುಡಿಯ ಸೀತಾರಾಮ ಕಲ್ಯಾಣ ಮಂದಿರದಲ್ಲಿ, 1 ಮತ್ತು 2ನೇ ವಾರ್ಡಿನವರು ಪಿ.ರಂಗನಾಥ- ಮೊ.97432-18504, ಅಶ್ವತ್ಥನಗರದ ಮುಚ್ಚಿಗರ ಸಮುದಾಯ ಭವನದಲ್ಲಿ, 30 ಮತ್ತು 33ನೇ ವಾರ್ಡಿನವರು ಎಂ.ಅಣ್ಣಪ್ಪ ಮೊ.99453-34616 ಎಂಕೆಕೆ ರಸ್ತೆ ಜೆಪಿಎನ್ ಶಾಲೆಯಲ್ಲಿ, 12, 21 ಮತ್ತು 22ನೇ ವಾರ್ಡಿನವರು ಆರ್.ಸತ್ಯನಾರಾಯಣ ಮೊ.98441-37669, ಗಾಂಧಿಬಜಾರ್ನ ಬಸವೇಶ್ವರ ದೇವಸ್ಥಾನದಲ್ಲಿ, 19 ಮತ್ತು 20ನೇ ವಾರ್ಡ್ನವರು ಎಸ್. ಸಾಧಿಕ್ ವುಲ್ಲಾ- ಮೊ.99640-62768, ದುರ್ಗಿಗುಡಿಯ ಸೀತಾರಾಮ ಕಲ್ಯಾಣ ಮಂದಿರದಲ್ಲಿ, 14 ಮತ್ತು 15ನೇ ವಾರ್ಡಿನವರು ಮೀರ್ ಇಕ್ಬಾಲ್ ಆಲಿ- ಮೊ.99024-79188 ಹರಿಗೆಯ ಶರಾವತಿ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ, 25 ಮತ್ತು 27ನೇ ವಾರ್ಡಿನವರು ಎಚ್. ಗುರುರಾಜ್ ಮೊ.94482-55898 ಮಿಳಘಟ್ಟದ ಸರ್ಕಾರಿ ಶಾಲೆಯಲ್ಲಿ, 4 ಮತ್ತು 13ನೇ ವಾರ್ಡಿನವರು ಕೆ.ಶಿವಾಜಿ- ಮೊ.97436-21626 ಸಿದ್ದೇಶ್ವರ ನಗರದ ಸರ್ಕಾರಿ ಶಾಲೆಯಲ್ಲಿ, 8 ಮತ್ತು 9ನೇ ವಾರ್ಡ್ನವರು ಮೊಹಮದ್ ಫಯಾಜ್ ಮೊ.98445-62797 ಜಯನಗರ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 31 ಮತ್ತು 32ನೇ ವಾರ್ಡಿನವರು ಲಕ್ಷ್ಮಣ ಮೊ.9611474296 ಮಂಡ್ಲಿಯ ಕೆ.ಆರ್. ನೀರು ಸರಬರಾಜು ಕೇಂದ್ರದಲ್ಲಿ, 3, 10 ವಾರ್ಡಿನವರು ನರಸಿಂಹಮೂರ್ತಿ-ಮೊ.9686974610 ಟ್ಯಾಂಕ್ ಮೊಹಲ್ಲಾದ ರಾಮಮಂದಿರದಲ್ಲಿ, 34 ಮತ್ತು 35ನೇ ವಾರ್ಡಿನವರು ವಿ.ಎಸ್. ಮುರಳೀಧರ್ ಮೊ.98801-23326 ಊರುಗಡೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ 23 ಮತ್ತು 24ನೇ ವಾರ್ಡಿನವರು ಕೆ. ಮಂಜುನಾಥ್ ಮೊ. 99458-32701 ಟಿಪ್ಪು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು ಸಲ್ಲಿಸಬಹುದಾಗಿದೆ ಎಂದು ನಗರಸಭಾ ಪೌರಾಯುಕ್ತರು ತಿಳಿಸಿದ್ದಾರೆ.