'ಕೆಲಸದಲ್ಲಿ ನಿಷ್ಠೆ ಮುಖ್ಯ'
ಕ.ಪ್ರ.ವಾರ್ತೆ, ಸೊರಬ, ಡಿ.30
ನಮ್ಮ ಆಸೆ ಪೂರ್ಣಗೊಳ್ಳುವ ಮುನ್ನ ಮತ್ತೊಂದು ಆಸೆ ನಮ್ಮ ಹಿಂದೆಯೇ ಇರುತ್ತದೆ. ಮನುಷ್ಯನಿಗೆ ಆಸೆ ಎಂಬುದು ಸಹಜ. ಆದರೆ, ಅದು ಇತಿಮಿತಿಯಲ್ಲಿರಬೇಕು ಎಂದು ಬೆಂಗಳೂರು ಲಯನ್ಸ್ ಕ್ಲಬ್ನ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಸಿ.ಕೆ. ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಜೀವಜ್ಯೋತಿ ಆಶ್ರಮದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಾಂತೀಯ ಸಮ್ಮೇಳನದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೆಲಸದಲ್ಲಿ ನಿಷ್ಠೆ ಮುಖ್ಯ. ಮುಂದಿನ ಅವಕಾಶಕ್ಕಾಗಿ ಕಾಯದೇ ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಸದಸ್ಯತ್ವ ಪಡೆಯಲು ಅರ್ಹ ಯೋಗ್ಯ ವ್ಯಕ್ತಿಗಳನ್ನು ಹುಡುಕಿ ಸಂಸ್ಥೆಯ ತತ್ವ- ಸಿದ್ಧಾಂತಕ್ಕೆ ಒಳಪಟ್ಟು ಕೆಲಸ ಮಾಡುವ ವ್ಯಕ್ತಿಗಳಿಗೆ ಸದಸ್ಯತ್ವ ನೀಡಲಾಗುತ್ತಿದೆ ಎಂದರು.
ಲಯನ್ ಲೇಡಿ ಸ್ನೇಹಾ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಜೀವಜ್ಯೋತಿ ಆಶ್ರಮದ ಫಾದರ್ ರೊನಾಲ್ಡ್ ಡಿ. ಕೋನ್ಹಾ, ಲಯನ್ ಎಚ್.ಎಸ್. ಮಂಜಪ್ಪ, ಡಾ. ಎಂ.ಕೆ. ಭಟ್, ಬಿ. ಗೋಪಾಲಪ್ಪ, ಕೆ. ಶಿವಾನಂದ್, ಕೆ. ಸುರೇಶ ಪ್ರಭು, ಡಿ. ಶ್ರೀಧರ ಶೆಣವಾ, ಓ.ಜಿ. ರುದ್ರಗೌಡ, ಲಕ್ಷ್ಮಿ ಪ್ರಸನ್ನಕುಮಾರ್, ಕೆ. ನಾಗರಾಜಗೌಡ, ಬಿ. ಗೋಪಾಲಪ್ಪ, ಲಯನ್ ಅಧ್ಯಕ್ಷ ಅಮೃತರಾಜ್, ಲಯನೆಸ್ ಅಧ್ಯಕ್ಷೆ ಭಾರತಿ ಹನುಮಂತಪ್ಪ, ದೀಪ್ತಿ ಕುಮಾರ್, ಬಿ.ಎನ್. ನಾಗರಾಜ್, ಎಚ್.ಎಂ. ಪ್ರತಿಮಾ, ಮೊದಲಾದವರು ಇದ್ದರು.