ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆಯಿಂದ ಮೇ 15ರ ವರೆಗೆ ಭದ್ರಾ ನಾಲೆಗೆ ನೀರು

Lingaraj Badiger
Updated On : 31 Dec 2013, 10:54 am

ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ 2013-14ನೇ ಸಾಲಿನ ಬೇಸಿಗೆ ಹಂಗಾಮು ಬೆಳೆಗಳಿಗೆ ನೀರು ಹರಿಸಲು ಭದ್ರಾ ಕಾಡಾ ಅಚ್ಚುಕಟ್ಟು ಪ್ರಾಧಿಕಾರದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿದೆ.
ಅದರಂತೆ ಆಧುನೀಕರಣ ಕಾಮಗಾರಿಗಳ ಅನುಷ್ಠಾನಗೊಳಿಸಲು ಅನುವು ಹಾಗೂ ರೈತರ ಅವಶ್ಯಕತೆಗನುಗುಣವಾಗಿ ಭದ್ರಾ ಜಲಾಶಯದಿಂದ ಅಚ್ಚುಕಟ್ಟಿನ ಭದ್ರಾ ಎಡದಂಡೆ ನಾಲೆ, ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆಗಳಲ್ಲಿ ಜ.1ರ ಮಧ್ಯರಾತ್ರಿ 12 ಗಂಟೆಯಿಂದ ಮೇ.15ರ ಮಧ್ಯರಾತ್ರಿ 12ಗಂಟೆವರೆಗೆ ಸತತವಾಗಿ ನೀರು ಹರಿಸಲಾಗುವುದು.
ಪ್ರಸ್ತುತ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ರಾಷ್ಟ್ರೀಯ ಜಲ ನಿರ್ವಹಣಾ ಯೋಜನೆಯನ್ವಯ 2014-15ರ ಮುಂಗಾರು ಹಂಗಾಮಿಗೆ ನೀರನ್ನು ಕಾಯ್ದಿರಿಸಿಕೊಳ್ಳುವ ಉದ್ಧೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ರೈತರು ಹೆಚ್ಚು ನೀರುಣ್ಣುವ ಬೆಳೆಗಳಾದ ಭತ್ತ ಹಾಗೂ ಕಬ್ಬು ಬೆಳೆಗಳನ್ನು ನಿಗದಿಪಡಿಸಿದ ಕ್ಷೇತ್ರ ಹೊರತುಪಡಿಸಿ, ಇತರೆಡೆ ಬೆಳೆಯಬಾರದು. ಈ ಯೋಜನೆಯ ಉದ್ಧೇಶಕ್ಕೆ ಪೂರಕವಾಗಿ ರೈತರು ನಡೆದುಕೊಳ್ಳುವಂತೆ ಅಧೀಕ್ಷಕ ಅಭಿಯಂತರ ಫಣಿರಾಜು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement