ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನೀರಿನ ಸಂರಕ್ಷಣೆ ಅರಿವಿಗಾಗಿ ಗೋಡೆ ಬರಹ

Rashmi Kasaragodu
Updated On : 2 Feb 2013, 11:47 am



ಶಿವಮೊಗ್ಗ: ನಾಟಿ ಹಾಕಿದ ಹೊಲ ಚಂದ, ಮೇಟಿ ನೆಟ್ಟ ಕಣ ಚಂದ, ಹಾಕು ಸಾವಯವ ಗೊಬ್ಬರ ನೋಡು ಬೆಳೆ ಅಬ್ಬರ...
 ನೀವು ಒಮ್ಮೆ ನಗರದ ಕೃಷಿ ಇಲಾಖೆ ಕಚೇರಿ ಎದುರು ಹಾದು ಹೋದರೆ ಇಂತಹ ಹತ್ತಾರು ಚಂದದ ಬರಹಗಳನ್ನು ನೋಡುತ್ತೀರಿ. ಇಲಾಖಾ ಕಚೇರಿಯ ಕಾಂಪೌಂಡ್ ಮೇಲೆ ಉದ್ದಕ್ಕೂ ಈ ರೀತಿಯ ಬರಹಗಳು ನೋಡುಗರನ್ನು ಸೆಳೆಯುತ್ತಿವೆ.
 ರೈತ ಸ್ನೇಹಿ ಪಕ್ಷಿ ಸಂಕುಲ ಉಳಿಸುವ ಬಗ್ಗೆ, ಹತ್ತಾರು ಜನರಿಗೆ ನೆರಳಾಗುವಂತೆ ರಸ್ತೆ ಬದಿ ಸಾಲು ಮರ ಬೆಳೆಸಿದ ಸಾಲುಮರ ತಿಮ್ಮಕ್ಕನ ಬಗ್ಗೆ, ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಬಗ್ಗೆ ಇಲ್ಲಿ ಚಿಕ್ಕಚಿಕ್ಕ ವಿವರಗಳಿವೆ. ಕಲಾವಿದ ತೀರ್ಥಾಚಾರ್ ಅವರು ಇದನ್ನು ರೂಪಿಸಿದ್ದಾರೆ. ಉಪಕಸುಬುಗಳನ್ನು ಪ್ರೋತ್ಸಾಹಿಸುವುದು, ಮಣ್ಣು ಮತ್ತು ನೀರಿನ ಸಂರಕ್ಷಣೆ ಅರಿವು ಮೂಡಿಸುವುದು, ಇಲಾಖಾ ಕಾರ್ಯಕ್ರಮಗಳ ತಿಳಿವಳಿಕೆ, ಮಿತ್ರ ಮತ್ತು ಉಪಕಾರಿ ಕೀಟಗಳ ಬಗ್ಗೆ ಮಾಹಿತಿ, ಕೃಷಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಈ ರೀತಿ ಗೋಡೆ ಬರಹದ ಮೂಲಕ ರೈತರಿಗೆ ತಿಳಿಸುವುದು ನಮ್ಮ ಉದ್ದೇಶ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement