ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಸಿ ಪ್ರವೀಣಕುಮಾರ್‌ಗೆ ಸನ್ಮಾನ

Lingaraj Badiger
Updated On : 4 Feb 2013, 11:36 am

ಸಾಗರ: ತಾಲೂಕು ಸರ್ಕಾರಿ ನೌಕರರ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಉಪವಿಭಾಗಾಧಿಕಾರಿ ಡಾ.ಜಿ.ಎಲ್. ಪ್ರವೀಣಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಅಕಾಲಿಕ ವರ್ಗಾವಣೆ: ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮ.ಸ.ನಂಜುಂಡಸ್ವಾಮಿ ಮಾತನಾಡಿ, ನೌಕರರನ್ನು ಹಾಗೂ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸರ್ಕಾರದ ಪರಮಾಧಿಕಾರವಾಗಿದ್ದರೂ, ಅಕಾಲಿಕ ವರ್ಗಾವಣೆ ಸರಿಯಲ್ಲ. ಅಕಾಲಿಕ ವರ್ಗಾವಣೆಯಿಂದ ಅಧಿಕಾರಿಗಳು ಹಾಗೂ ನೌಕರರು ಮಕ್ಕಳ ಶಿಕ್ಷಣ ಮುಂತಾದ ವಿಷಯದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಂಘದ ಕೇಂದ್ರ ಪರಿಷತ್ ಸದಸ್ಯ ವಿ. ಚಂದ್ರಶೇಖರ್, ಉಪಾಧ್ಯಕ್ಷೆ ಲತಾ, ಮೈಲಪ್ಪ, ಅರುಣಕುಮಾರ್, ಚನ್ನಕೇಶವ್, ನಾಗಭೂಷಣ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಸವರಾಜ್, ಗಣಪತಪ್ಪ,ಪರಮೇಶ್ವರ, ಪ್ರಭಾಕರ, ದತ್ತಾತ್ರೇಯ ಬೊಂಗಾಳೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement