ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆ ಉಚಿತ ನೇತ್ರ ಪರಿಕ್ಷೆ, ಚಿಕಿತ್ಸೆ

Lingaraj Badiger
Updated On : 5 Feb 2013, 10:44 am

ಶಿರಾಳಕೊಪ್ಪ: ಉಚಿತ ನೇತ್ರ ಪರಿಕ್ಷೆ, ಉಚಿತ ನೇತ್ರ ಚಿಕಿತ್ಸೆ ಹಾಗೂ ಉಚಿತ ಮಸೂರ ಅಳವಡಿಕೆ ಶಿಬಿರ ಫೆ.5 ರಂದು ನಡೆಯಲಿದೆ.
ಲಯನ್ಸ್ ಕ್ಲಬ್ ಶಿರಾಳಕೊಪ್ಪ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸೊರಬ ರಸ್ತೆಯಲ್ಲಿರುವ ಎಸ್.ಜೆ.ಪಿ ಐಟಿಐ ಕಾಲೇಜು ಆವರಣದಲ್ಲಿ  ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ.
ನೇತ್ರ ಚಿಕಿತ್ಸೆ ಮತ್ತು ನೇತ್ರ ಪರೀಕ್ಷೆ ತಜ್ಞ ವೈದ್ಯರಿಂದ ನಡೆಯಲಿದ್ದು, ಶಿಬಿರದಲ್ಲಿ ಚಿಕ್ಕ ಮಕ್ಕಳು ಮತ್ತು ವಯಸ್ಸಾದ ಎಲ್ಲರಿಗೂ ಕಣ್ಣಿಗೆ ಸಂಬಂಧಿಸಿದ ತೊಂದರೆಗಳಿಗೆ ಉಚಿತವಾಗಿ ನೇತ್ರ ತಜ್ಞರ ಸಲಹೆ ಕೊಡಲಾಗುವದು. ಶಿಬಿರದಲ್ಲಿ ನೇತ್ರ ಚಿಕಿತ್ಸೆಗೆ ಅರ್ಹರಾದವರನ್ನು ಶಿವಮೊಗ್ಗಕ್ಕೆ ಕರೆತಂದು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುವದು.
ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಲಯನ್ಸ್ ಅಧ್ಯಕ್ಷ ಎನ್.ಜಿ. ಗಿರೀಶ್ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮಹೇಂದ್ರ ಕುಮಾರ್‌ಜೈನ್ 9845226131, ಬಿ. ಪ್ರಭುಲಿಂಗಪ್ಪ, 9902456641, ಡಾ.ಎಸ್. ಮುರಘರಾಜ್, 9845154794, ಚಂದ್ರಶೇಕರ ಮಂಚಾಲಿ 9740290970 ಹಾಗೂ ಲಯನ್ಸ್ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement