ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿರೋಧ ಪಕ್ಷದ ವಿರೋಧ: ವಿಶೇಷ ಸಭೆ ರದ್ದು

Lingaraj Badiger
Updated On : 5 Feb 2013, 10:44 am

ಶಿಕಾರಿಪುರ: ಸಾಮಾನ್ಯ ಸಭೆ ಆಯೋಜಿಸಬೇಕಾಗಿದ್ದ ಆಡಳಿತ ಪಕ್ಷ ಸ್ವಪಕ್ಷೀಯರ ಗೈರು ಹಾಗೂ ವಿರೋಧ ಪಕ್ಷದ ವಿರೋಧದ ನಡುವೆಯೇ ವಿಶೇಷ ಸಭೆ ಪ್ರಾರಂಭಿಸಿ, ಆ ಸಭೆಯೂ ದಿಢೀರನೆ ರದ್ದುಗೊಂಡ ಘಟನೆ ಪಟ್ಟಣದ ಪುರಸಭೆಯಲ್ಲಿ ಸೋಮವಾರ ನಡೆಯಿತು.
  ಪಟ್ಟಣದ ಪುರಸಭೆಯ ಸದಸ್ಯರ ಅವಧಿ ಇದೇ 14 ಕ್ಕೆ ಕೊನೆಯಾಗಲಿದ್ದು, ಈ ದಿಸೆಯಲ್ಲಿ ಆಡಳಿತಾರೂಢ  ಕೆಜೆಪಿ ಬೆಂಬಲಿತ ಬಿಜೆಪಿಯು ಸೋಮವಾರ ಪುರಸಭೆಯ ಅಂತಿಮ ಸಭೆಯನ್ನು ವಿಶೇಷ ಸಭೆಯನ್ನಾಗಿ ನಿಗದಿಪಡಿಸಿತ್ತು.
ಅನುಮಾನಕ್ಕೆಡೆ: ಆದರೆ ಈ ಸಭೆಗೆ ಆಡಳಿತಾರೂಢ ಸದಸ್ಯರೆ ಹೆಚ್ಚಿನ ಪ್ರಮಾಣದಲ್ಲಿ ಗೈರುಹಾಜರಾಗಿದ್ದರು. ಈ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯ ಹುಲ್ಮಾರ್ ಮಹೇಶ್ ಮಾತನಾಡಿ, ಕಳೆದ ನವೆಂಬರ್ ನಂತರದಲ್ಲಿನ ಸಭೆ ಇದಾಗಿದ್ದು, ಕಳೆದ ಬಾರಿಯ ಸಭೆಯಲ್ಲಿನ ಹಲವು ದಾಖಲೆ ಬಗ್ಗೆ ಸದಸ್ಯರ ಅನುಮೋದನೆ ಪಡೆಯಬೇಕಾಗಿದ್ದ ಈ ಸಭೆಯನ್ನು ಏಕಾಏಕಿ ವಿಶೇಷ ಸಭೆ ಎಂದು ಘೋಷಿಸುವ ಮೂಲಕ ಆಡಳತ ಪಕ್ಷ ಹಲವು ಅನುಮಾನ ಹುಟ್ಟುಹಾಕಿದೆ ಎಂದರು.
  ಪಟ್ಟಣದ ಸಮಗ್ರ ಅಭಿವೃದ್ಧಿಗೆ ಇದುವೆರೆಗಿನ ಎಲ್ಲಾ ಮೂವರು ಅಧ್ಯಕ್ಷರಿಗೆ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ತಮ್ಮ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಬೆಂಬಲ ವ್ಯಕ್ತಪಡಿಸಿ, ಪೂರಕವಾಗಿ ಸ್ಪಂದಿಸಿದ್ದು, ಇದೀಗ ಅಂತಿಮ ಸಭೆಯನ್ನು ಸಾಮಾನ್ಯ ಸಭೆಯನ್ನಾಗಿಸದೆ ಕೇವಲ ಹೊಂದಾಣಿಕೆಯ ವಿಶೇಷ ಸಭೆಯನ್ನಾಗಿಸುವ ದುರಂತವನ್ನು ತಪ್ಪಿಸಲು ವಿರೋಧ ವ್ಯಕ್ತಪಡಿಸಿರುವುದಾಗಿ ಕಾಂಗ್ರೆಸ್ ಸದಸ್ಯ ಪಾರಿವಾಳದ ಶಿವರಾಂ ತಿಳಿಸಿದರು.
  ಸಾಮಾನ್ಯ ಸಭೆ ಆಯೋಜಿಸುವಂತೆ ಒತ್ತಾಯಿಸಿ ಮುಖ್ಯಾಧಿಕಾರಿ ಮನೋಹರ್ ಅವರಿಗೆ ಕಾಂಗ್ರೆಸ್ ಸದಸ್ಯರು ಮನವಿ ಸಲ್ಲಿಸಿದರು.
  ಪುರಸಬಾಧ್ಯಕ್ಷೆ ಜಬೀನಾ, ಗುರುರಾಜ ಜಗತಾಪ್, ಬಷೀರ್ ಸಾಬ್, ಸುಧಾ, ಶೋಭಾ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement