ಕೆಜೆಪಿ ಸಂಘಟನೆಗೆ ಹೆಚ್ಚಿನ ಒತ್ತು: ಸುರೇಶ್
ಹೊಸನಗರ: ಮುಂಬರುವ ಚುನಾವಣೆ ಮತ್ತು ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ಹಿನ್ನೆಲೆಯಲ್ಲಿ ತಳಮಟ್ಟದಿಂದ ಪಕ್ಷ ಸಂಘಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಾಟಗೋಡು ಸುರೇಶ ಹೇಳಿದರು.
ಪಟ್ಟಣದ ಸುದ್ದಿಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೂತ್ಮಟ್ಟದಲ್ಲಿ 750 ರಿಂದ 1,500ದಷ್ಟು ಮತದಾರರಿದ್ದು, 15 ರಿಂದ 30 ಸದಸ್ಯರನ್ನೊಳಗೊಂಡ ಬೂತ್ ರಚಿಸಲಾಗುವುದು ಎಂದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 200 ಮತದಾರರಿಗೆ ಒಬ್ಬರಂತೆ ಕನಿಷ್ಠ 15 ಸದಸ್ಯರಿಂದ ಮತದಾರರ ಸಂಖ್ಯೆಗೆ ಅನುಗುಣವಾಗಿ ಸಮಿತಿ ರಚಿಸಲಾಗುವುದು. ಪ್ರತಿ ತಾಪಂ ವ್ಯಾಪ್ತಿಯಲ್ಲಿ 400 ಮತದಾರರ ಸಂಖ್ಯೆಗೆ ಅನುಗುಣವಾಗಿ ಒಬ್ಬ ಸದಸ್ಯರಂತೆ ಕೆಜೆಪಿ ಮಂಡಲ್ ರಚಿಸಲಾಗುವುದು ಇದಲ್ಲದೆ ಜಿಪಂ ವ್ಯಾಪ್ತಿಯಲ್ಲಿ ಕೆಜೆಪಿ ಪರಿಷತ್ನ್ನು ಅಸ್ತಿತ್ವಕ್ಕೆ ತರಲು ಸಿದ್ದತೆ ನಡೆಸಲಾಗಿದೆ ಎಂದರು.
ಕೆಜೆಪಿ ಎನ್.ಆರ್. ದೇವಾನಂದ್, ಪಕ್ಷದ ಪ್ರಮುಖರಾದ ಬಿ. ಯುವರಾಜ್, ಸುಬ್ರಹ್ಮಣ್ಯ, ಚಂದ್ರಶೇಖರ್, ಮುಂಬಾರು ಶಿವಾನಂದ್, ಮಂಡಾನಿ ಮೋಹನ್, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.