ಕೋಟಿಪುರದಲ್ಲಿ ರೈತರ ಪ್ರತಿಭಟನೆ
ಸೊರಬ: ತಾಲೂಕಿನ ಆನವಟ್ಟಿಯಲ್ಲಿ ಗ್ರಿಡ್ ಇದ್ದರೂ ಸಮರ್ಪಕ ವಿದ್ಯುತ್ ನೀಡಲು ಮುಂದುವರೆಯುತ್ತಿಲ್ಲ ಎಂದು ಆನವಟ್ಟಿ ಭಾಗದ ರೈತರು ಗುರುವಾರ ಪ್ರತಿಭಟನೆ ನಡೆಸಿದರು.
ಕೋಟಿಪುರ ಬಳಿಯಲ್ಲಿರುವ ಗ್ರಿಡ್ ಎದುರು ಮೊಕ್ಕಾಂ ಹೂಡಿರುವ ಪ್ರತಿಭಟನಕಾರರು ಅಲ್ಲಿಯೇ ಊಟ, ವಸತಿಗೆ ಸಜ್ಜಾಗಿ ಬಂದಿದ್ದರು. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ವಿದ್ಯುತ್ ಅಸಮರ್ಪಕತೆಗೆ ಕಾರಣ ಎಂದು ದೂರಿಕೊಂಡ ಅವರು, ನಮಗೆ ಬಳ್ಳಿಗಾಮೆ, ಭಾರಂಗಿ ಗ್ರಿಡ್ ಮೂಲಕ ವಿದ್ಯುತ್ ಬೇಡ, ಕೂಡಲೆ ಇದೇ ಗ್ರಿಡ್‌ನಿಂದಲೇ ವಿದ್ಯುತ್ ಸರಬರಾಜು ಮಾಡಿ, ಎಂದು ಪಟ್ಟು ಹಿಡಿದು ಕುಳಿತಿದ್ದರು.
ರುದ್ರಗೌಡ ಪಾಟೀಲ್, ಬಸವನಗೌಡ, ವೀರಣ್ಣ, ನೇರಲಿಗೆ, ಮಂಜಣ್ಣ, ಜಗದೀಶ್ ಹೊಸಹಳ್ಳಿ, ದಯಾನಂದ, ಬಸವರಾಜ್, ಮಹೇಶ್, ಶಿವನಗೌಡ, ಚೆನ್ನಬಸಪ್ಪ, ಕುಬಟೂರು ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ್ ಸೇರಿದಂತೆ ಹಲವು ರೈತರು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.