ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಸಂಖ್ಯೆ ಮಾಹಿತ

Parashurama
Updated On : 8 Feb 2013, 9:55 am

ಶಿವಮೊಗ್ಗ: ನಗರಸಭಾ ವ್ಯಾಪ್ತಿಯ ಆಸ್ತಿ ಮಾಲಿಕರೇ, ನಿಮಗೊಂದು ಸಿಹಿ ಸುದ್ದಿ. ಕೇವಲ 30 ವೆಚ್ಚದಲ್ಲಿ ನಿಮ್ಮ ಆಸ್ತಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಆಸ್ತಿ ಸಂಖ್ಯೆಯನ್ನು ಮಾಹಿತಿಗಳನ್ನು ಹಾಕುವ ಕಾರ್ಯ ನಗರ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಅಗತ್ಯ ಮಾಹಿತಿ ಅಡಕಗೊಂಡಿರುವ ಶಾಶ್ವತ ಮೆಟಲ್ ಪ್ಲೇಟನ್ನು ಮನೆ ಮುಂದೆ ಅಳವಡಿಸುವುದು ಈ ಯೋಜನೆಯ ಸಾರಾಂಶ. ಪ್ರಮುಖವಾಗಿ ನಂಬರ್ ಪ್ಲೇಟ್‌ನಲ್ಲಿ ಮನೆ ಸಂಖ್ಯೆ, ರಸ್ತೆ ಹೆಸರು, ಪ್ರದೇಶದ ಹೆಸರು, ಖಾತೆ ಸಂಖ್ಯೆ, ವಾರ್ಡ್ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಹಾಕಲಾಗಿರುತ್ತದೆ.
ವಿದ್ಯುಕ್ತವಾಗಿ ಆರಂಭ: ಎಲ್ಲಾ ಆಸ್ತಿ ಮಾಲಿಕರಿಗೆ ಶಾಶ್ವತ ಮೆಟಲ್ ನಂಬರ್ ಪ್ಲೇಟ್ ಅಳವಡಿಸಿಕೊಡುವ ಗುತ್ತಿಗೆಯನ್ನು ಕೊಲ್ಕತ್ತಾದ ಯುನೈಟೆಡ್ ಕಮರ್ಷಿಯಲ್ ಇಂಡಸ್ಟ್ರೀಸ್ ಆಫ್ ಇಂಡಿಯಾ ಪಡೆದಿದ್ದು, ಈ ಸಂಸ್ಥೆಯವರು ನಗರದಲ್ಲಿ ಪ್ಲೇಟ್ ಅಳವಡಿಸುವ ಕಾರ್ಯವನ್ನು ಮಂಗಳವಾರದಿಂದ ವಿದ್ಯುಕ್ತವಾಗಿ ಆರಂಭಿಸುತ್ತಿದ್ದಾರೆ. ಶಿವಮೊಗ್ಗ ನಗರಸಭಾ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಮಾಲೀಕರು ತಮ್ಮ ಆಸ್ತಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಆಸ್ತಿ ಸಂಖ್ಯೆ ಹಾಗೂ ಇತರ ಮಾಹಿತಿಗಳನ್ನು ಹಾಕಲು ನಗರ ಸಭೆಯು ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
 ಆಸ್ತಿ ಮಾಲೀಕರು ತಮ್ಮ ಆಸ್ತಿಗಳಿಗೆ ಮೆಟಲ್ ನಂಬರ್ ಪ್ಲೇಟನ್ನು ಸ್ಥಳದಲ್ಲಿಯೇ ಅಳವಡಿಸಿಕೊಂಡು ನಿಗದಿತ 30 ಶುಲ್ಕ ಪಾವತಿಸಿ ರಸೀದಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮನೆಯ ಬಾಗಿಲು, ಗ್ರಿಲ್, ಗೋಡೆಗಳಿಗೆ 4-7 ಅಳತೆಯ ಪ್ಲೇಟ್ ಅಳವಡಿಸಲಾಗುತ್ತದೆ.
ಸರ್ವೆ ಕಾರ್ಯ: ಪ್ಲೇಟ್ ಅಳವಡಿಕೆ ಕಾರ್ಯ ನಿರ್ವಹಿಸಲು 15 ಜನರ ತಂಡ ಸಿದ್ಧವಾಗಿದೆ. ಈ ತಂಡ ಪ್ಲೇಟ್ ಅಳವಡಿಸುವ ಜೊತೆ ಜೊತೆಗೆ ಸರ್ವೆಯೊಂದನ್ನು ಮಾಡುತ್ತಿದೆ.
ಮನೆ ಸದಸ್ಯರ ವಿವರ, ಉದ್ಯೋಗ, ಉದ್ಯೋಗಸ್ಥರು, ಅನಕ್ಷರಸ್ಥರು ಹೀಗೆ 18 ಬಗೆಯ ಮಾಹಿತಿಯನ್ನು ಕಲೆ ಹಾಕುತ್ತದೆ. ನಂತರ ಮಾಹಿತಿ ಸಮ ಗ್ರಗೊಳಿಸಿ ನಗರಸಭೆಗೆ ನೀಡಲಾಗುತ್ತದೆ. ನಗರಸಭೆಗೆ ಶಿವಮೊಗ್ಗದ ಬಗ್ಗೆ ಒಂದು ಚಿತ್ರಣ ಲಭ್ಯವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments