ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ಶ್ಲಾಘನೀಯ
ಸೊರಬ: ಶಿಕ್ಷಣದ ಉನ್ನತೀಕರಣಕ್ಕೆ ಕೇವಲ ಅಕ್ಷರ ಜ್ಞಾನವೊಂದೇ ಸಹಕಾರಿಯಲ್ಲ, ಭೌತಿಕ ಪ್ರಗತಿ ಕೂಡ ಪೂರಕವಾಗಿರುತ್ತದೆ ಎಂದು ಜಿಪಂ ಸದಸ್ಯೆ ಕೋಮಲಾ ನಿರಂಜನ್ ತಿಳಿಸಿದರು.
ತಾಲೂಕಿನ ಟಿ.ಜಿ. ಕೊಪ್ಪ ಗ್ರಾಮದ ಸಕಿಪ್ರಾ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಾಲಾ ಸಮಿತಿ ಮತ್ತು ಗ್ರಾಮಸ್ಥರು ಜಂಟಿಯಾಗಿ ಹಮ್ಮಿಕೊಂಡಿದ್ದ ದಾನಿಗಳ ಮೇಳ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಅಕ್ಷರ ದಾನಕ್ಕಿಂತ ಶ್ರೇಷ್ಠ ದಾನ ಇನ್ನೊಂದಿಲ್ಲ, ಅದರಲ್ಲೂ ತಾವು ಹುಟ್ಟಿ ಬೆಳೆದ ನೆಲೆಯ ಮೇಲೆ ಅಭಿಮಾನ ಇರಿಸಿ, ಶೈಕ್ಷಣಿಕ ಪ್ರಗತಿಗೆ ಈ ಮೂಲಕ ಪ್ರೋತ್ಸಾಹ ನೀಡುವುದು ಶ್ಲಾಘನೀಯ ಎಂದ ಅವರು, ಗ್ರಾಮಸ್ಥರು ಪ್ರಸಕ್ತ ಸಾಲಿನಲ್ಲಿ 75 ಸಾವಿರಕ್ಕೂ ಅಧಿಕ ಮೌಲ್ಯದ ಕೊಡುಗೆಗಳನ್ನು ನೀಡುವ ಮೂಲಕ ಶಾಲಾ ಪ್ರಗತಿಗೆ ಸಹಕರಿಸಿದ್ದಾರೆ ಎಂದರು.
ಇದೇ ವೇಳೆ ಶಿಕ್ಷಕರನ್ನು ಸನ್ಮಾನಿಸಲಾಯಿತು. ಚಂದ್ರೇಗೌಡ, ಎಂ. ಚಂದ್ರಪ್ಪ, ಜಗದೀಶ್, ಲಕ್ಷ್ಮೀ ಜಗದೀಶ್, ಆನಂದಪ್ಪ, ರವಿ, ಭೂದೇಶಮ್ಮ, ಶಿಕ್ಷಣ ಇಲಾಖೆಯ ಹಾಲೇಶ್ ನವುಲೆ, ಸುದರ್ಶನ, ಸುರೇಶ್, ಪಿಡಿಒ ಶ್ರೀರಾಮ್, ಮುಖ್ಯ ಶಿಕ್ಷಕ ಇಬ್ರಾಹಿಂ ಎಸ್. ದೊಡ್ಡಮನಿ, ಶಿಕ್ಷಕಿ ಸುಶ್ಮಾ, ಶಾಲಾ ಸಮಿತಿಯವರು, ಗ್ರಾಮಸ್ಥರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.