ರಾಜ್ಯ ಬಜೆಟ್ 2013
ಎಲ್ಲಾ ಕ್ಷೇತ್ರಕ್ಕೂ ಹಣವನ್ನು ವೀಸಲಿಡಲಾಗಿದೆ. ಆದರೆ ಅದು ದುರ್ಬಳಕೆಯಾಗದೇ ಸದ್ಭಳಕೆ ಆಗುವಂತೆ ಎಚ್ಚರವಹಿಸಬೇಕಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
-ರಾಮಲಿಂಗಪ್ಪ, ಖಾಸಗಿ ಕಂಪನಿ ಉದ್ಯೋಗಿ
ಇದು ಜನವಿರೋಧಿ ಬಜೆಟ್. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಘಸಂಸ್ಥೆಗಳಿಗೆ ಹಣ ನೀಡುವ ಬದಲು ಉಪಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವ ಸಂಸ್ಥೆಗೆ ಜನರ ತೆರಿಗೆ ಹಣವನ್ನು ಅನುದಾನ ರೂಪದಲ್ಲಿ ನೀಡಿರುವುದು ಸಾರ್ವಜನಿಕ ಹಣದ ಅಪವ್ಯಯವಾಗಿದೆ.
-ಬಿ.ಎ. ರಮೇಶ್ ಹೆಗಡೆ, ನಗರಸಭಾ ಮಾಜಿ ಅಧ್ಯಕ್ಷ
ಈ ಬಾರಿಯ ಬಜೆಟ್‌ನಲ್ಲಿ ಹೊಸತನವೇನು ಇಲ್ಲ. ಕಳೆದ ಬಾರಿಯ ಬಜೆಟ್ ಅನ್ನೇ ತಿರುಚಲಾಗಿದೆ ಅಷ್ಟೇ. ಚರ್ವಿತಚರ್ವಣವಾಗಿದೆ. ಜನರ ಕಣ್ಣಿಗೆ ಮಣ್ಣೆರಚಲಾಗಿದೆ.
-ಪಿ.ಎಸ್. ವಿಶ್ವಕೀರ್ತಿ, ಚಾರ್ಟ್‌ಟೆಡ್ ಅಕೌಂಟೆಡ್
ಕಳೆದ ಬಾರಿ ಮಾಡಿದ ಬಜೆಟ್‌ನಲ್ಲಿಯು ಕೂಡ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದರು. ಆದರೆ, ಬಜೆಟ್‌ನ ಯಾವುದೇ ಅಂಶಗಳು ರೈತರಿಗೆ ಪಯೋಗವಾಗಿಲ್ಲ. ಅಲ್ಲದೇ, ಈ ಬಾರಿಯ ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಜನಪ್ರತಿನಿಧಿಗಳು ಮರೆತಿರುವುದು ಬೇಸರ ತಂದಿದೆ.
-ಶ್ರೀನಿವಾಸ್, ರೈತ, ಭದ್ರಾವತಿ
ಮಠಾಧಿಶರಿಗೆ ಹೆಚ್ಚಿನ ಸೌಲಭ್ಯ ಒಳ್ಳೆಯದಲ್ಲ. ಇದು ಉತ್ತಮ ಸಮಾಜ ರೂಪಿಸಲು ಅನುಕೂಲವಾಗುವುದಿಲ್ಲ. ಅಲ್ಲದೇ, ಮಧ್ಯಮ ವರ್ಗದವರ ಬಗ್ಗೆ ಹೆಚ್ಚಿನ ಕಾಳಜಿವಹಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು.
-ನಾಗರಾಜ್, ಖಾಸಗಿ ಕಂಪನಿ ಉದ್ಯೋಗಿ, ಭದ್ರಾವತಿ
ಈ ಬಾರಿಯ ಬಜೆಟ್‌ನಲ್ಲಿ ಕೃಷಿಗೆ ವೀಸಲಿಟ್ಟಿರುವ 22 ಸಾವಿರ ಕೋಟಿ ರುಪಾಯಿ ಹಣ ಎಷ್ಟರ ಮಟ್ಟಿಗೆ ಬಳಕೆಯಾಗುತ್ತದೆ ಎಂದು ನೋಡಬೇಕಿದೆ. ಈ ಬಾರಿ ಕೃಷಿಗೆ ವೀಸಲಿಟ್ಟಿರುವ ಹಣ ಸದ್ಭಳಕೆಯಾಗಲಿ ಎಂಬುದು ನಮ್ಮ ಆಶಯ.
-ಪ್ರಶಾಂತ ಕುಮಾರ್, ರೈತ, ಭದ್ರಾವತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.