ಶಿಕ್ಷಣ ವ್ಯವಸ್ಥೆಯ ಗಂಭೀರ ಚಿಂತನೆ ಅಗತ್ಯ
ಹೊಸನಗರ: ಇಂದಿನ ಶಿಕ್ಷಣ ವ್ಯವಸ್ಥೆ ಅನೇಕ ಗೊಂದಲ ಹುಟ್ಟುಹಾಕಿದೆ. ದೂರದೃಷ್ಟಿ ಆಲೋಚನೆಯೊಂದಿಗೆ ಗಂಭೀರ ಚಿಂತನೆ ನಡೆಸುವುದು ಅಗತ್ಯ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಯಡೂರು ಸರ್ಕಾರಿ ಪ್ರೌಢಶಾಲೆಯ ಸುವರ್ಣ ಸಂಭ್ರಮ ಉದ್ಘಾಟಿಸಿ, ಅಂಕಪಟ್ಟಿಯ ಸಾಧನೆಯನ್ನಾಧರಿಸಿ ಹೊರದೇಶಕ್ಕೆ ಹೋಗುವ ವ್ಯಾಮೋಹಕ್ಕೆ ಒಳಗಾಗುತ್ತಿರುವ ವಿದ್ಯಾರ್ಥಿಗಳು, ಸುಶಿಕ್ಷಿತರಿಂದಲೆ ಅಪರಾಧಿ ಕೃತ್ಯಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹಿಂದೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಅಲ್ಲದೆ ಹೆಣ್ಣುಮಕ್ಕಳು ಮನೆ ಹೊಸಿಲು ದಾಟುತ್ತಿರಲಿಲ್ಲ. ಆದರೆ ಅಂದು ನಮ್ಮನೆ, ನಮ್ಮೂರು, ಸಂಸ್ಕೃತಿ, ಹಿರಿಯರ ಬಗ್ಗೆ ಕಾಳಜಿ, ನಂಬಿಕೆ, ವಿಶ್ವಾಸಕ್ಕೆ ಕೊರತೆ ಇರಲಿಲ್ಲ. ಆದರೀಗ ಬಹುತೇಕರು ಸುಶಿಕ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ದುಶ್ಚಟ, ಅಪರಾಧಿಕೃತ್ಯಗಳತ್ತ ಪ್ರೇರೇಪಿತರಾಗುತ್ತಿದ್ದು ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಾಗಿದೆ. ಶಿಕ್ಷಣದೊಳಗಿನ ವ್ಯವಸ್ಥೆ ಬಗ್ಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು. ಪ್ರೀತಿ, ಒಡನಾಟ, ಬದುಕಿಗೆ ಅರ್ಥ ನೀಡುವ ಮತ್ತು ಬದುಕುವ ಕಲೆ ಕಲಿಸುವ ಶಿಕ್ಷಣ ಬೇಕು. ಮುಖ್ಯವಾಗಿ ದೇಶದ ಬಹುಪಾಲನ್ನು ಆವರಿಸಿರುವ ಗ್ರಾಮೀಣ ಪ್ರದೇಶದತ್ತ ವಿದ್ಯಾರ್ಥಿಗಳು ಒಲವು ತೋರುವ ಶಿಕ್ಷಣ ಬೇಕಾಗಿದೆ ಎಂದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.