ಕೊರಗ ಜನಾಂಗ ಮುಖ್ಯವಾಹಿನಿಗೆ ಬರಲಿ
ಹೊಸನಗರ: ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಕೊರಗ ಜನಾಂಗ ಮುಖ್ಯವಾಹಿನಿಗೆ ಬರಬೇಕಿದೆ ಎಂದು ತಾಪಂ ಸದಸ್ಯೆ ಸುಮಾ ಸುಬ್ರಹ್ಮಣ್ಯ ಹೇಳಿದರು.
ತಾಲೂಕಿನ ನಗರ ಮಾರಿಕಾಂಬ ದೇಗುಲ ಆವರಣದಲ್ಲಿ ಕ್ರೀಡಾ ಜ್ಯೋತಿಗೆ ಚಾಲನೆ ನೀಡಿ, ಕೇವಲ ಶ್ರಮಕ್ಕೆ ಮಾತ್ರ ಸೀಮಿತಗೊಳ್ಳದೆ ತಮ್ಮಲ್ಲಿಯ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ನಿರ್ಮಾಣ ಮಾಡುವ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ ಎಂದರು.
ಶೋಷಿತ ಸಮುದಾಯದಿಂದ ಬಂದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ತಮ್ಮ ಪ್ರತಿಭೆಯಿಂದ ಇಡೀ ಜಗತ್ತನ್ನೇ ಬೆಳಗಿದರು. ಮಾತ್ರವಲ್ಲ ಸಮುದಾಯದ ಶಕ್ತಿಯನ್ನು ಪ್ರಚುರಪಡಿಸಿದರು. ಅವರ ಸಂದೇಶ ಪಾಲಿಸುತ್ತ ದುಶ್ಚಟಗಳನ್ನು ದೂರವಿಟ್ಟು, ಸರ್ಕಾರದ ಸೌಲಭ್ಯ ಬಳಸಿಕೊಂಡು ಕೊರಗ ಸಮುದಾಯ ಪ್ರಗತಿಹೊಂದಬೇಕು ಎಂದರು.
ಉತ್ತಮ ಬೆಳವಣಿಗೆ: ಅಧ್ಯಕ್ಷತೆ ವಹಿಸಿದ್ದ ನಗರ ಗ್ರಾಪಂ ಅಧ್ಯಕ್ಷ ಎಚ್.ವೈ. ಸತೀಶಗೌಡ, ಇದೇ ಮೊದಲ ಬಾರಿಗೆ ಕೊರಗ ಜನಾಂಗದ ಅಂತರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಸಾಂಸ್ಕೃತಿಕ ಮತ್ತು ಕ್ರೀಡಾಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದಾದ ಸಾಕಷ್ಟು ಪ್ರತಿಭಾವಂತರಿದ್ದಾರೆ. ಮುಖ್ಯವಾಹಿನಿಗೆ ಬರುವಲ್ಲಿ ಕೀಳರಿಮೆ ತೊರೆಯಬೇಕು ಎಂದರು.
ಜಿಪಂ ಸದಸ್ಯ ಕಲಗೋಡು ರತ್ನಾಕರ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕ್ರೀಡಾಕೂಟ ಸಂಘಟಕ ಗೋಪಾಲಶೆಟ್ಟಿ, ಗ್ರಾಪಂ ಸದಸ್ಯ ಮುತ್ತಮ್ಮ, ನಾಗೇಶ್, ಮುಖಂಡ ಕರುಣಾಕರಶೆಟ್ಟಿ, ಹಾಲಗದ್ದೆ ಉಮೇಶ್, ಉಪನ್ಯಾಸಕ ಗಣೇಶ ನಿಲ್ಸಕಲ್, ಕೊರಗ ಸಮುದಾಯದ ಪ್ರಮುಖ ಗಣೇಶ್, ಲಕ್ಷ್ಮಣ್, ಶರತ್, ನಾಗಣ್ಣ, ಕೃಷ್ಣ, ಮಾಸ್ತಿ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.