ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ

Parashurama
Updated On : 11 Feb 2013, 11:13 am

ಸಾಗರ: ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸುವುದಕ್ಕಿಂತ ಗೋಸಂರಕ್ಷಣೆಯಲ್ಲಿ ನಮ್ಮ ಪಾತ್ರವೇನು, ಗೋಹತ್ಯೆ ನಿಲ್ಲಿಸಲು ನಾವು ಮಾಡಬಹುದಾದ ಕೆಲಸವೇನು ಎನ್ನುವ ಕುರಿತು ಆತ್ಮಾವಲೋಕನ ಅಗತ್ಯ ಎಂದು ಜೋಷಿ ಫೌಂಡೇಶನ್ ಮ್ಮುಖ್ಯಸ್ಥ ದಿನೇಶ ಕುಮಾರ್ ಜೋಷಿ ಹೇಳಿದರು.
   ಇಲ್ಲಿನ ಪುಣ್ಯಕೋಟಿ ಗೋ ಸಂರಕ್ಷಣಾ ವೇದಿಕೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗೋಧ್ವಜಾರೋಹಣ ನೆರವೇರಿಸಿ, ಗೋವು ಚೆನ್ನಾಗಿದ್ದಾಗ ಅದರಿಂದ ಪೂರ್ಣ ಲಾಭ ಪಡೆದುಕೊಳ್ಳುವ ನಾವು ಅದಕ್ಕೆ ವಯಸ್ಸಾದಾಗ ಕಸಾಯಿಖಾನೆಗೆ ಸಾಗಿಸುವ ಸಂಸ್ಕೃತಿ ಅತ್ಯಂತ ಹೀನವಾದದ್ದು. ಗೋವುಗಳಿಗೂ ಬದುಕುವ ಹಕ್ಕು ಇದೆ ಎನ್ನುವುದನ್ನು ನಾವು ಮರೆತಿರುವುದು ಖೇದದ ಸಂಗತಿ ಎಂದು ಹೇಳಿದರು.
ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತನ್ನಿ: ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಬಿ.ಎನ್.ವಿ. ಸುಬ್ರಹ್ಮಣ್ಯ, ರಾಜ್ಯ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಎರಡನೇ ಬಾರಿಗೆ ಕಾಯ್ದೆಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಕಳಿಸಲಾಗಿದೆ. ರಾಜ್ಯಪಾಲರು ಕಾಯ್ದೆಗೆ ಅಂಕಿತ ಹಾಕಲು ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ.
   ಈ ಬಾರಿಯಾದರೂ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬರುವಂತಾಗಬೇಕು. ಆಗ ಗೋಹತ್ಯೆ ನಿಲ್ಲುತ್ತದೆ ಎಂದರಲ್ಲದೆ ಗೋಸಂತತಿ ಉಳಿಸಿಬೆಳೆಸುವ ಕೆಲಸ ಮಾಡುತ್ತಿರುವವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ನಡೆಯಬೇಕು ಎಂದು ಆಶಿಸಿದರು.
ಸನ್ಮಾನ: ಗೋಸಂರಕ್ಷಣೆಯಲ್ಲಿ ತೊಡಗಿರುವ ಕೆ.ಆರ್.ಗಂಗಾಧರ್ ಹಾಗೂ ಗಣಪತಿ ಸುಳಗೋಡು ಅವರನ್ನು ಸನ್ಮಾನಿಸಲಾಯಿತು. ಕುಂಟಗೋಡು ಸೀತಾರಾಮ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮ.ಸ.ನಂಜುಂಡಸ್ವಾಮಿ, ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ, ಸದಸ್ಯ ನಾಗರಾಜ ಸುಬ್ರು, ಪ್ರಮುಖರಾದ ಎಂ.ವಿ. ಸತ್ಯನಾರಾಯಣ, ಯು.ಎಚ್. ರಾಮಪ್ಪ, ಸಿ. ಗೋಪಾಲ ಕೃಷ್ಣರಾವ್, ಜಿ. ಕುಮಾರ್ ಹೊನ್ನಪ್ಪ , ಪುರುಷೋತ್ತಮ, ಸದಾನಂದ ಶರ್ಮ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments