ಗಾಂಜಾ, ಬೀಟೆ ನಾಟಾ ವಶ: ಆರೋಪಿಗಳ ಬಂಧನ
ಸೊರಬ: ತಾಲೂಕು ಆಡಳಿತ, ಆರಕ್ಷಕ ಇಲಾಖೆಗಳು ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಗಾಂಜಾ, ಸಾಗುವಾನಿ, ಬೀಟೆ ಮರಗಳ ಕಡಿತಲೆ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಗೆಂಡ್ಲಾ ಗ್ರಾಮದಲ್ಲಿನ ಅಬ್ದುಲ್(45) ಎಂಬುವವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 4.5 ಕೆ.ಜಿ. ಗಾಂಜಾ, 9 ಸಾಗುವಾನಿ ತುಂಡು, 27 ಸೈಜ್, ರು. ಬೀಟೆ ಸೈಜ್ ಹಾಗೂ ಆನವಟ್ಟಿ ಸಂತೆ ಮಾರುಕಟ್ಟೆಯಲ್ಲಿ ಗಾಂಜಾ ಮಾರುತ್ತಿದ್ದ ಗೋಪಾಲ (ರು.ರು.)ನ ಬಳಿ 1250 ಗ್ರಾಂ ಗಾಂಜಾ ಇದ್ದುದು ಪತ್ತೆಯಾಗಿದೆ.
ದಾಳಿಯಲ್ಲಿ ದೊರೆತ ಮಾಲು ಹಾಗೂ ಆರೋಪಿಗಳನ್ನು ಬಂಧಿಸಲಾಗಿದೆ.
ಡಿವೈಎಸ್ಪಿ ಮಂಜುನಾಥ್ ಮಾರ್ಗದರ್ಶನದಲ್ಲಿ ತಹಸೀಲ್ದಾರ್ ಶ್ರೀಧರಮೂರ್ತಿ ಪಂಡಿತ್, ವೃತ್ತ ನಿರೀಕ್ಷಕ ಎಫ್.ಎನ್. ಲಿಂಗದಾಳ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಿಎಸ್ಐ ಅಂಬಾರಾಯ್, ರಘು, ತಾರಾನಾಥ್, ಜಗದೀಶ್, ಕುಮಾರ್ ಅರಳಿಕಟ್ಟಿ, ಲೋಕೇಶ್, ಮೂರ್ತಿ, ಬಂಗಾರಪ್ಪ, ಧನಲಕ್ಷ್ಮೀ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.