ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ

Lingaraj Badiger
Updated On : 13 Feb 2013, 10:42 am

ಸಾಗರ: ಗೋಪಾಲಗೌಡ ಕ್ರೀಡಾಂಗಣದಲ್ಲಿ ರೂರಲ್ ಜೋನ್ ಆಯೋಜಿಸಿರುವ ಸಾಗರ್ ಪ್ರೀಮಿಯರ್ ಲೀಗ್ 20-ಟ್ವೆಂಟಿ ಕ್ರಿಕೆಟಿಗೆ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಪಂದ್ಯಾವಳಿಯ ವಿಜೇತರಿಗೆ ನೀಡುವ ಟ್ರೊಫಿಯನ್ನು ಉಪ ವಿಭಾಗಾಧಿಕಾರಿ ಡಾ.ಬಿ. ಉದಯ್ ಕುಮಾರ್ ಶೆಟ್ಟಿ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು.
ನಿರಂತರ ಪ್ರಯತ್ನವಿದ್ದರೆ ಸಾಧನೆ ಸಾಧ್ಯವಾಗುತ್ತದೆ. ದೈಹಿಕ ಸವಾಲುಗಳ ನಡುವೆ ಸಾಧಿಸಿದ ವಿಲ್ಮಾ ರುಡಾಲ್ಫ್‌ನಂಥ ಕ್ರೀಡಾಪಟುಗಳಿದ್ದಾರೆ. ಸವಾಲುಗಳನ್ನು ಗೆಲ್ಲುವ, ಸಾಧನೆಯ ಕನಸು ಕಾಣುವ ಹಾಗೂ ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುವ ಸಂಕಲ್ಪ ಅಗತ್ಯ ಎಂದು ಉಪವಿಭಾಗಾಧಿಕಾರಿಗಳು ಹೇಳಿದರು.
ನಗರಸಬೆ ಅಧ್ಯಕ್ಷ ರಾಧಾಕೃಷ್ಣ ಬೇಂಗ್ರೆ, ಕ್ರೀಡೆಗೆ ನಗರಪ್ರದೇಶಗಳಲ್ಲಿ ಸಿಕ್ಕಷ್ಟು ಪ್ರೋತ್ಸಾಹ ಗ್ರಾಮೀಣ ಪ್ರದೇಶದಲ್ಲಿ ಸಿಗುತ್ತಿಲ್ಲ ಎಂದರು. ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್, ಹಿರಿಯ ಕ್ರಿಕೆಟಿಗ ನಾರಾಯಣಪ್ಪ, ಪೇಟೆ ಠಾಣೆ ವೃತ್ತ ನಿರೀಕ್ಷಕ ಮಂಜಪ್ಪ, ಪಂದ್ಯಾವಳಿ ಸಂಘಟಕ ಶ್ರೀನಿವಾಸ್ ಕಾಳೆ, ಕಿರಣ್‌ಕುಮಾರ್, ಗಣೇಶ್ ಪ್ರಸಾದ್ ಹಾಜರಿದ್ದರು. ಅಂತರರಾಷ್ಟ್ರೀಯ ಅಥ್ಲೆಟ್ ಅರ್ಪಿತಾ ಅವರನ್ನು ಸನ್ಮಾನಿಸಲಾಯಿತು.
ತಾಲೂಕಿನ ವಿವಿಧ ಭಾಗಗಳ 164 ಕ್ರಿಕೆಟಿಗರು 8 ತಂಡಗಳ ಮೂಲಕ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.
ತಾಲೂಕಿನ ಇತಿಹಾಸ ಪ್ರಸಿದ್ಧ ಸ್ಥಳಗಳ, ಧಾರ್ಮಿಕ ಕ್ಷೇತ್ರಗಳ ಹೆಸರುಗಳನ್ನು ತಂಡಕ್ಕೆ ಇಡುವ ಮೂಲಕ ಪಂದ್ಯಾವಳಿಗೆ ಸ್ಥಳೀಯ ಛಾಪು ಮೂಡಿಸುವ ಪ್ರಯತ್ನ ಸಂಘಟಕರಿಂದ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement