ಅಭಿವೃದ್ಧಿ ಕಾರ್ಯ ಕುಂಠಿತವಾಗಲಿದೆ
ಶಿಕಾರಿಪುರ: ಸ್ಥಳೀಯ ಸಂಸ್ಥೆಯ ಚುನಾವಣಾ ವೇಳಾಪಟ್ಟಿ ಚುನಾವಣಾ ಆಯೋಗದ ಮೂಲಕ ಬಿಡುಗಡೆಯಾಗಿದೆ. ಈ ದಿಸೆಯಲ್ಲಿ ರಾಜ್ಯದಲ್ಲಿ ಬರುವ 3- 4 ತಿಂಗಳು ಅಭಿವೃದ್ಧಿಕಾರ್ಯ ಶಾಶ್ವತವಾಗಿ ಕುಂಠಿತವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಗುರುವಾರ ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಯ ವೇಳಾಪಟ್ಟಿ ಬಿಡುಗಡೆಗೊಳಿಸಿದೆ. ನಂತರದಲ್ಲಿ ವಿಧಾನಸಭೆ ಚುನಾವಣೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿಕಾರ್ಯ ಸತತ ಸ್ಥಗಿತವಾಗಲಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಸೂಕ್ತ ರೀತಿಯಲ್ಲಿ ಮನವಿ ಸಲ್ಲಿಸಿ ಸಾಮಾನ್ಯನ ತೊಂದರೆಯನ್ನು ತಪ್ಪಿಸಬಹುದಾಗಿತ್ತು ಎಂದು ತಿಳಿಸಿದರು.