ಕೆಜೆಪಿ ಕಾರ್ಯಾಲಯ ಉದ್ಘಾಟನೆ
ತೀರ್ಥಹಳ್ಳಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆಜೆಪಿ ಉಪಾಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ತೀರ್ಥಹಳ್ಳಿ ಪಟ್ಟಣದಲ್ಲಿ ಕೆಜೆಪಿ ಕಾರ್ಯಾಲಯ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಜೆಪಿ ಅಧಿಕಾರದ ಗದ್ದುಗೆ ಹಿಡಿಯುತ್ತದೆ. ಇಲ್ಲದಿದ್ದರೆ ಅಧಿಕಾರ ನಡೆಸುವ ಪಕ್ಷಗಳ ಜೊತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಜ್ಯೋತಿ ಪ್ರಕಾಶ್ ಕೆಜೆಪಿ ಕಚೇರಿ ಉದ್ಘಾಟನೆ ನೆರವೇರಿಸಿದರು. ನಂತರ ಅವರು ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಮಂಜುನಾಥ ಗೌಡರನ್ನು ಗೆಲ್ಲಿಸಬೇಕು ಎಂದರು.
ಕೆಜೆಪಿ ತಾಲೂಕು ಘಟಕದ ತೀರ್ಥಹಳ್ಳಿ ಭಾಗದ ಕಾರ್ಯದರ್ಶಿಯಾಗಿ ಶಚೀಂದ್ರ ಹೆಗ್ಡೆ, ಕೋಣಂದೂರು ಭಾಗದ ಕಾರ್ಯದರ್ಶಿಯಾಗಿ ರಾಮಚಂದ್ರ, ಮಹಿಳಾ ಅಧ್ಯಕ್ಷರಾಗಿ ಸುಷ್ಮಾ ಸಂಜಯ್, ಅಧ್ಯಕ್ಷರಾಗಿ ಕೊಡಿಗೆಬೈಲು ಪೂರ್ಣೇಶ ಆಯ್ಕೆಯಾದರು.