176 ವಾರ್ಡ್‌ಗಳು, 532 ಮತಗಟ್ಟೆಗಳು
ಶಿವಮೊಗ್ಗ: ಪೌರಸಂಸ್ಥೆ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಜಿಲ್ಲೆಯ 9 ಸಂಸ್ಥೆಗಳ ಪೈಕಿ ಅವಧಿ ಮುಗಿಯದ ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ಹೊರತುಪಡಿಸಿ ಉಳಿದೆಲ್ಲಾ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.
ಶಿವಮೊಗ್ಗ, ಭದ್ರಾವತಿ, ಸಾಗರ ನಗರಸಭೆಗಳು, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ, ತೀರ್ಥಹಳ್ಳಿ, ಹೊಸನಗರ, ಸೊರಬ ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 176 ವಾರ್ಡ್‌ಗಳಲ್ಲಿ 532 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
4,13,305 ಮತದಾರರು: ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರು ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಚುನಾವಣೆ ಸಿದ್ಧತೆಯ ಸಂಪೂರ್ಣ ಮಾಹಿತಿ ನೀಡಿ, 2,07,724 ಪುರುಷರು, 2,05,581 ಮಹಿಳೆಯರು ಸೇರಿದಂತೆ 4,13,305 ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ ಎಂದರು.
ಈಗಾಗಲೇ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪೌರಸಂಸ್ಥೆ ಚುನಾವಣೆಗೆ ವಿದ್ಯುನ್ಮಾನ ಯಂತ್ರಗಳನ್ನು ಬಳಸಲಾಗುವುದು. ಚುನಾವಣೆ ಸಂಬಂಧ ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಪೂರ್ಣ ಪ್ರಮಾಣದ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ಪ್ರತಿ ಪೌರಸಂಸ್ಥೆಗೆ ನೋಡಲ್ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಶಿವಮೊಗ್ಗ ನಗರಸಭೆಗೆ ಜಿಲ್ಲಾ ಪಂಚಾಯ್ತಿಯ ಮುಖ್ಯ ಲೆಕ್ಕಪರಿಶೋಧಕರು ನೋಡಲ್ ಅಧಿಕಾರಿಯಾಗಿದ್ದರೆ, ಉಳಿದ ಪೌರಸಂಸ್ಥೆಗಳಿಗೆ ಆಯಾ ತಾಲೂಕಿನ ತಾಲೂಕು ಪಂಚಾಯ್ತಿಯ ಲೆಕ್ಕ ಪರಿಶೋಧಕರು ನೋಡಲ್ ಅಧಿಕಾರಿಯಾಗಿದ್ದಾರೆ ಎಂದರು.
2007ರ ಮೀಸಲಾತಿಯಂತೆಯೇ ಈ ಚುನಾವಣೆ ನಡೆಯಲಿದ್ದು, ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲ ಎಂದರು.
ಫ್ಲೆಕ್ಸ್, ಬಂಟಿಂಗ್ಸ್ ಇಲ್ಲ: ಶುಕ್ರವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ನಗರ ಹಾಗೂ ಪಟ್ಟಣ ಪ್ರದೇಶದಲ್ಲಿರುವ ಎಲ್ಲಾ ಬ್ಯಾನರ್‌ಗಳು, ಬಂಟಿಂಗ್ಸ್‌ಗಳು ಗೋಡೆ ಜಾಹಿರಾತು ಪತ್ರಗಳನ್ನು ತೆಗೆದುಹಾಕಲು ಜಿಲ್ಲಾಡಳಿತ ಸೂಚಿಸಿದೆ.
ಪ್ರಚಾರಕ್ಕಾಗಿಯೂ ಸಹ ಅಭ್ಯರ್ಥಿಗಳು ಹಾಗೂ ಪಕ್ಷಗಳು ಫ್ಲೆಕ್ಸ್ಬ್‌ಳಸುವುದಕ್ಕೆ ಅನುಮತಿ ಇಲ್ಲ. ಬಳಸಿದಲ್ಲಿ ಕಾನೂನಿನಂತೆ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.
ನಗರ ಹಾಗೂ ಪೌರಸಂಸ್ಥೆ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ನೀಡಿದ್ದ ವಾಹನಗಳನ್ನು ಹಿಂಪಡೆಯಲಾಗುವುದು. ಆದರೆ ಅವರ ಕಾರ್ಯವ್ಯಾಪ್ತಿಯು ಪೌರಸಂಸ್ಥೆ ಮೀರಿದ್ದಾಗಿದ್ದರೆ ಅದನ್ನು ಪರಿಶೀಲಿಸಲಾಗುವುದು ಎಂದ ಅವರು, ಈಗಾಗಲೇ ಆರಂಭವಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಲು ಸಮಸ್ಯೆ ಇಲ್ಲ. ಆದರೆ ಹೊಸದಾಗಿ ಕಾಮಗಾರಿಗಳನ್ನು ಆರಂಭಿಸುವಂತಿಲ್ಲ ಎಂದರು.
ವೀಕ್ಷಕರ ನೇಮಕ: ಜಿಲ್ಲೆಗೆ ವೀಕ್ಷಕರಾಗಿ ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತ ಕೆ.ಸಿ. ಶ್ರೀರಾಮಯ್ಯ ಹಾಗೂ ದಾವಣಗೆರೆ ನಗರಪಾಲಿಕೆ ಆಯುಕ್ತ ಭೀಮಪ್ಪ ಅವರನ್ನು ಆಯೋಗ ನೇಮಕ ಮಾಡಿದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಚುನಾವಣೆ ಹಿನ್ನಲೆಯಲ್ಲಿ ಅಗತ್ಯ ಪೊಲೀಸ್ಭ್‌ದ್ರತೆ ನಿಯೋಜಿಸಲಾಗಿದೆ. ಪ್ರತಿ ಯುನಿಟ್‌ಗೆ ಒಬ್ಬ ಅಧಿಕಾರಿ ಇರುತ್ತಾರೆ. ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಠಿಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಮತ್ತಿತರರು ಇದ್ದರು.
ಚುನಾವಣಾಧಿಕಾರಿಗಳ ಕಚೇರಿಗಳು
ವಾರ್ಡ್:1, 2, 5, 6, 7, 8
- ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ
ವಾರ್ಡ್: 9, 10, 16, 17, 18, 19, 20, 23
- ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿಗಳ ಕಚೇರಿ
ವಾರ್ಡ್: 23, 24, 25, 26, 28, 31, 33
- ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಸಹಾಯಕ ಹಣಕಾಸು ನಿಯಂತ್ರಣಾಧಿಕಾರಿಗಳ ಕಚೇರಿ
ವಾರ್ಡ್: 11, 12, 21, 22, 27, 29, 30
- ಗಾಂಧಿ ನಗರ ಗಾಂಧಿ ಪಾರ್ಕ್ ಹತ್ತಿರದ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ
ವಾರ್ಡ್: 4, 13, 14, 15, 32, 34, 35
- ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ
ವಾರ್ಡ್: 1ರಿಂದ 11
- ತಾಲೂಕು ಕಚೇರಿ
ವಾರ್ಡ್:1, 2, 3, 32, 33, 34
- ಹಳೇನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
ವಾರ್ಡ್:4, 5, 6, 7, 8, 9, 10
- ಸಹಾಯಕ ಕೃಷಿ ನಿರ್ದೇಶಕರ ಕಚೇರಿ
ವಾರ್ಡ್:11, 12, 13, 14, 15, 16, 17
- ತಾಲೂಕು ಪಂಚಾಯ್ತಿ ಕಚೇರಿ
ವಾರ್ಡ್: 18, 19, 20, 21, 22, 23, 24,
- ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿ
ವಾರ್ಡ್: 25, 26, 27, 28, 29, 30, 31
- ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ
ವಾರ್ಡ್:1, 15, 16, 17, 18, 19, 20, 28
- ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ
ವಾರ್ಡ್:2, 3, 4, 5, 6, 7, 8, 14
- ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ
ವಾರ್ಡ್:9, 10, 11, 12, 13, 21, 22, 23
- ತಾಲೂಕು ಪಂಚಾಯ್ತಿ ಕಚೇರಿ
ವಾರ್ಡ್:24, 25, 26, 27, 29, 30, 31
- ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
ವಾರ್ಡ್: 1ರಿಂದ 12
- ತಾಲೂಕು ಪಂಚಾಯ್ತಿ ಕಚೇರಿ
ವಾರ್ಡ್: 13ರಿಂದ 23
- ತಾಲೂಕು ಕಚೇರಿ
ವಾರ್ಡ್: 1ರಿಂದ 15
- ಪಟ್ಟಣ ಪಂಚಾಯ್ತಿ ಕಚೇರಿ
ವಾರ್ಡ್: 1ರಿಂದ 15
- ತಾಲೂಕು ಕಚೇರಿ
ವಾರ್ಡ್: 1ರಿಂದ 11
- ತಾಲೂಕು ಕಚೇರಿ