ಇಂದಿನಿಂದ ಸಾಂಸ್ಕೃತಿಕ ಉತ್ಸವ (ಸುದ್ದಿ ಸಂಕ್ಷೇಪ)
ಸಾಗರ: ಇಲ್ಲಿನ ಶ್ರೀ ಗಣಾಧೀಶ್ವರ ಸೇವಾ ಟ್ರಸ್ಟ್‌ವತಿಯಿಂದ ಫೆ. 16 ಮತ್ತು 17 ರಂದು ಗಣಪತಿ ದೇವಸ್ಥಾನದ ಹೊರ ಆವರಣದಲ್ಲಿ ಎರಡು ದಿನಗಳ ಕಲೋಪಾಸನ ಸಾಂಸ್ಕೃತಿಕ ಉತ್ಸವ ಏರ್ಪಡಿಸಲಾಗಿದೆ. ಫೆ. 16 ರಂದು ಸಂಜೆ 5-30 ರಿಂದ ಗಾನ-ವೈವಿಧ್ಯ ಶರಣ, ದಾಸ, ಭಾವ ಸಾಹಿತ್ಯಗಳ ಜುಗಲಲ್ಬಂಧಿ ಕಾರ್ಯಕ್ರಮವಿದ್ದು, ಗಾಯನದಲ್ಲಿ ಹೆಸರಾಂತ ಕಲಾವಿದರಾದ ಬೆಂಗಳೂರಿನ ರಮ್ಯ ವಸಿಷ್ಠ, ಹುಬ್ಬಳ್ಳಿಯ ಪಂಡಿತ್ ಕೃಷ್ಣೇಂದ್ರ ವಾಡಿಕರ್, ರವಿ ಮುರೂರು ಪಾಲ್ಗೊಳ್ಳುವರು. ಫೆ. 17 ರಂದು ಸಂಜೆ 5-30 ರಿಂದ ಬೆಂಗಳೂರಿನ ಖ್ಯಾತ ಗಾಯಕರಾದ ಸುರಮಣಿ ದತ್ತಾತ್ರೆಯ ವೇಲಣಕರ ಇವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ಹಾಗೂ ಸಂಜೆ 7 ರಿಂದ ಅಂತರಾ ತಂಡ ಮುಂಬೈ ಇವರಿಂದ ಹಳೆಯ ಹಿಂದಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮವಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.
18ರಂದು ವಿದ್ಯುತ್‌ವ್ಯತ್ಯಯ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಫೆಬ್ರವರಿ 18ರಂದು ಬೆಳಿಗ್ಗೆ 9ರಿಂದ ಸಂಜೆ 6ಗಂಟೆಯವರೆಗೆ ಮೆಸ್ಕಾಂನ ಘಟಕ-5ರ ವ್ಯಾಪ್ತಿಯಲ್ಲಿ ವ್ಯವಸ್ಥೆ ಸುಧಾರಣಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶದ ವ್ಯಾಪ್ತಿಗೊಳಪಡುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗೋಪಶೆಟ್ಟಿಕೊಪ್ಪ, ಟಿಪ್ಪು ನಗರ, ಆರ್.ಎಂ.ಎಲ್.ನಗರ, ಮಂಜುನಾಥ ಬಡಾವಣೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೂಚನೆ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿಶೇಷವಾಗಿ ವಿಜ್ಞಾನ, ಗಣಿತ, ಆಂಗ್ಲ ಭಾಷಾ ಶಿಕ್ಷಕರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಪದವಿ ಬಿಎಸ್ಸಿ, (ಸಿಪಿಎಂ, ಸಿಬಿಜಡ್) ಹಾಗೂ ಬಿಎ, (ಆಂಗ್ಲ) ವ್ಯಾಸಂಗಕ್ಕೆ ರೆಗ್ಯುಲರ್ ಆಗಿ ಹಾಗೂ ವೇತನ ಸಹಿತವಾಗಿ ನಿಯೋಜಿಸಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಫೆಬ್ರವರಿ 25ರೊಳಗಾಗಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಿ, ಸ್ವೀಕೃತಿ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕುಮಾರ್ ತಿಳಿಸಿದ್ದಾರೆ.
ನಾಳೆ ಹಸಿರು ಆರೋಗ್ಯ ಅಭಿಯಾನ
ಸೊರಬ: ತಾಲೂಕಿನ ನಿಸರಾಣಿ ವಿಸಂ ಪ್ರೌಢಶಾಲೆ ಆವರಣದಲ್ಲಿ ಇದೇ 17ರ ಭಾನುವಾರ ಬೆಳಗ್ಗೆ 10.30ಕ್ಕೆ ಹಸಿರು ಆರೋಗ್ಯ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪಶ್ಚಿಮ ಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ, ವಿದ್ಯಾಭಿವೃದ್ಧಿ ಸಂಘ, ಸೌರಭ ಸಾಂಸ್ಕೃತಿಕ ಟ್ರಸ್ಟ್‌ನ ಸರಾಣಿ, ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸೊರಬ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ, ತಜ್ಞ ಸಂಪನ್ಮೂಲ ವ್ಯಕ್ತಿಗಳಾಗಿ ಪಶ್ಚಿಮ ಘಟ್ಟ ಕಾರ್ಯಪಡೆ ಸದಸ್ಯ ಬಿ.ಎಂ. ಕುಮಾರಸ್ವಾಮಿ, ಸಾಗರದ ವೈದ್ಯ ಡಾ. ನಿರಂಜನ ಹೆಗಡೆ, ಪರಿಸರ ತಜ್ಞ, ವೈದ್ಯ ಆನೆಗುಳಿ ಸುಬ್ರಾವ್, ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ರಾಘವೇಂದ್ರ ಆಗಮಿಸಲಿದ್ದಾರೆ. ವಿಸಂ ಅಧ್ಯಕ್ಷ ಶ್ರೀಪಾದರಾವ್ ನಿಸರಾಣಿ, ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿರುತ್ತಾರೆಹೆಚ್ಚಿನ ಮಾಹಿತಿಗೆ ಎಸಿಎಫ್ 9480354500, ಆರ್‌ಎಫ್‌ಒ 9449217189, ಸತೀಶ್ ಎಂ. ಮಳಲಗದ್ದೆ 9448200502, ಶ್ರೀಪಾದ ಬಿ.ನ.9448384004 ಸಂಪರ್ಕಿಸಬಹುದು.