ಕಬಡ್ಡಿಯಲ್ಲಿ ಸ್ಟೇಟ್ಬ್ಯಾಂಕ್ ಆಫ್ ಮೈಸೂರು ಪ್ರಥಮ
ಶಿವಮೊಗ್ಗ: ನಗರದಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರಿನ ಸ್ಟೇಟ್ಬ್ಯಾಂಕ್ ಆಫ್ ಮೈಸೂರು (ಪುರುಷರ ವಿಭಾಗ), ಮೂಡುಬಿದಿರೆಯ ಅಳ್ವಾಸ್ ತಂಡ (ಮಹಿಳೆಯರ ವಿಭಾಗ) ಪ್ರಥಮ ಸ್ಥಾನ ಪಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಒಲಿಪಿಂಕ್, ಸ್ವಾಮಿ ವಿವೇಕಾನಂದ ಕಬಡ್ಡಿ ಕ್ಲಬ್, ಯುವಜನ ಸೇವಾ ಕ್ರೀಡಾ ಪ್ರಾಧಿಕಾರ ಪಂದ್ಯಾವಳಿಯನ್ನು ಆಯೋಜಿಸಿದ್ದವು. ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ವಿಜಯ ಬ್ಯಾಂಕ್ ಮತ್ತು ಎಸ್ಬಿಎಂ ತಂಡದ ನಡುವೆ ತೀವ್ರ ಹಣಾಹಣಿ ಏರ್ಪಟಿತ್ತು. ಎಸ್ಬಿಎಂ 16 ಅಂಕಗಳನ್ನು ಪಡೆದರೆ, ವಿಜಯ ಬ್ಯಾಂಕ್ 8 ಅಂಕ ಪಡೆದು ಸೋಲು ಅನುಭವಿಸಿತು.
ಮಹಿಳೆಯ ವಿಭಾಗದ ಅಂತಿಮ ಪಂದ್ಯದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಮತ್ತು ಪುತುರಿನ ಸೆಟ್ ಫಿಲೋಮಿನಾ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟು, ಆಳ್ವಾಸ್ 16 ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ಸೆಟ್ ಫಿಲೋಮಿನಾ ತಂಡ 6 ಅಂಕ ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆಯಿತು.
ಇನ್ನೂ ಸೆಮಿಫೈನಲ್ನಲ್ಲಿ ಎಸ್ಬಿಎಂ ಮತ್ತು ಎಚ್ಎಎಲ್ ನಡುವೆ ನಡೆದ ಪಂದ್ಯದಲ್ಲಿ ಎಸ್ಬಿಎಂ 14 ಅಂಕ ಗಳಿಸಿ ಫೈನಲ್ಗೆ ಕಾಲಿಕ್ಕಿತ್ತು.