ಕಾಡಾನೆಗಳ ದಾಳಿ: ಬಿಡಾರ ಆನೆ ಸಾವು
ಶಿವಮೊಗ್ಗ: ಕಾಡಾನೆಗಳ ದಾಳಿಯಿಂದ ಸಕ್ರೆಬೈಲು ಆನೆ ಬಿಡಾರದ ಆನೆ ರಾಜೇಂದ್ರ (33) ಎಂಬ ಗಂಡಾನೆಯೊಂದು ದುರಂತ ಸಾವು ಕಂಡ ಘಟನೆ ಅರಣ್ಯದೊಳಗೆ ನಡೆದಿರುವುದು ಭಾನುವಾರ ಮುಂಜಾನೆ ಬೆಳಕಿಗೆ ಬಂದಿದೆ.
ಶನಿವಾರ ಬೆಳಗ್ಗೆ ಎಂದಿನಂತೆ ರಾಜೇಂದ್ರ ಸೇರಿದಂತೆ ಬಿಡಾರದಲ್ಲಿರುವ ಇತರೆ ಆನೆಗಳಿಗೆ ತುಂಗಾ ನದಿಯಲ್ಲಿ ಸ್ನಾನ ಮಾಡಿಸಿ, ಆಹಾರ ನೀಡಿ ಸಮೀಪದ ಕಾಡಿನಲ್ಲಿ ಮೇಯಲು ಬಿಡಲಾಗಿತ್ತು. ಭಾನುವಾರ ಬೆಳಗ್ಗೆ ಕಾಡಿನಿಂದ ಸಾಕಾನೆಗಳನ್ನು ಮತ್ತೆ ಬಿಡಾರಕ್ಕೆ ಕರೆತರಲು ಹೋದ ವೇಳೆ ಜೇನುಕಲ್ಲುಸರ ಪ್ರದೇಶದಲ್ಲಿ ರಾಜೇಂದ್ರ ಮೃತಪಟ್ಟಿರುವುದು ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಈ ವಿಷಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮುಟ್ಟಿಸಿದರು.