ವಿಶ್ವನಾಥನ್ ಆನಂದ್ಗೆ ಗೆಲುವು: ಜಂಟಿ ಅಗ್ರಸ್ಥಾನಕ್ಕೆ ಜಿಗಿತ
ಬಡೆನ್ ಬಡೆನ್: ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್, ಕೊನೆಗೂ ತಮ್ಮ ಡ್ರಾ ಫಲಿತಾಂಶದ ಸರಪಳಿಯನ್ನು ಕಳಚಿ ಗೆಲುವಿನ ನಗೆ ಬೀರಿದ್ದಾರೆ. ಇಲ್ಲಿ ನಡೆಯುತ್ತಿರುವ ಗ್ರೆಂಕ್ ಕ್ಲಾಸಿಕ್ ಚೆಸ್ ಚಾಂಪಿಯನ್ಷಿಪ್ನ 9ನೇ ಸುತ್ತಿನಲ್ಲಿ ಜರ್ಮನಿಯ ಡೇನಿಯಲ್ ಫ್ರಿಡ್ಮನ್ ವಿರುದ್ಧ ಜಯಗಳಿಸುವುದರ ಜತೆಗೆ ಜಂಟಿ ಮೊದಲ ಸ್ಥಾನಕ್ಕೇರಿದೆ. ಈ ಪಂದ್ಯಾವಳಿಯಲ್ಲಿ ಹಲವು ಬಾರಿ ಗೆಲುವಿನಿಂದ ವಂಚಿತರಾಗಿದ್ದ ಆನಂದ್ ಮಹತ್ವದ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಪಂದ್ಯಾವಳಿಯಲ್ಲಿ 5.5 ಅಂಕಗಳನ್ನು ಪಡೆದ ಆನಂದ್, ಇಟಲಿಯ ಫ್ಯಾಬಿಯಾನೊ ಕರ್ವಾನಾ ಜತೆ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೊಂದು ಮಹತ್ವದ ಪಂದ್ಯದಲ್ಲಿ ಫ್ಯಾಬಿಯಾನೊ ಕರ್ವಾನಾ ಇಂಗ್ಲೆಂಡ್ನ ಮೈಕಲ್ ಆ್ಯಡಮ್ಸ್ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. ಈ ಪಂದ್ಯದಲ್ಲಿ ಕರ್ವಾನ ಅವರ ಸೋಲು ಆನಂದ್ ಅವರಿಗೆ ಜಂಟಿ ಅಗ್ರ ಸ್ಥಾನಕ್ಕೇರಲು ಸಹಾಯವಾಯಿತು.
ಪಂದ್ಯಾವಳಿಯಲ್ಲಿ ಇನ್ನು ಒಂದು ಸುತ್ತು ಬಾಕಿ ಉಳಿದಿದ್ದು, ಆನಂದ್ ಹಾಗೂ ಕರ್ವಾನ ಅವರಿಗೆ ಅಗ್ರ ಸ್ಥಾನದಲ್ಲಿ ಉಳಿಯಲು ಮಹತ್ವದ ಪಂದ್ಯವಾಗಿದೆ.
9ನೇ ಸುತ್ತಿನ ಫಲಿತಾಂಶ: ಆನಂದ್ (5.5)- ಡೇನಿಯಲ್ ಫ್ರಿಡ್ಮನ್ ವಿರುದ್ಧ ಜಯ, ಜಾರ್ಜ್ ಮಿಯರ್ (4.5)- ಅರ್ಕಾಡ್ ನಾಡಿಸ್ಕ್ (4) ವಿರುದ್ಧ ಗೆಲುವು, ಫ್ಯಾಬಿಯಾನೊ ಕರ್ವಾನ (5.5)- ಮೈಕಲ್ ಆ್ಯಡಮ್ಸ್ (4.5) ವಿರುದ್ಧ ಸೋಲು.